Mankutimmana Kagga by D.V. Gundappa
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು । ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ॥ ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ । ರಗಳೆಗಾರೆಗೆ ಬಿಡುವೊ? - ಮಂಕುತಿಮ್ಮ ॥ ೬೪೯ ॥
jagavu enna muddisadedu Ekendu koragadiru । maguvu nIm pettarge, lOkake spardhi ॥ hegala hore huTTidarge ellam irutire, ninna । ragaLegArige biDuvo? - Mankutimma ॥ 649 ॥
ಜಗದೊಳಿರುವ ಜನರೆಲ್ಲ ನನ್ನನ್ನು ಪ್ರೀತಿಸಿಬೇಕು, ಎಂದು ಅಪೇಕ್ಷೆಪಟ್ಟು, ಅದು ಆಗದಿದ್ದಾಗ ನೀನು ಕೊರಗಬೇಡ. ನಿನ್ನ ಹೆತ್ತವರಿಗೆ ನೀನು ಮಗು, ಆದರೆ ಲೋಕಕ್ಕೆ ಪ್ರತಿಸ್ಪರ್ಧಿ. ಹುಟ್ಟಿದವರಿಗೆಲ್ಲಾ ಅವರವರ ಬಾಳಿನ ಹೊರೆ ಇದ್ದೇ ಇರುತ್ತದೆ. ನಿನ್ನ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ಬಿಡುವಿಲ್ಲ ಎಂದು ಪ್ರತಿಯೊಬ್ಬರೂ ಅವರವರ ಜೀವನದ ಹೊರೆಯನ್ನು ಅವರವರೇ ಹೊರಬೇಕಾದ ಅನಿವಾರ್ಯತೆಯನ್ನು ಸ್ಪಷ್ಟೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Why do you worry that the world does not love you. You are the loving child of only your parents. For the rest of the world, you are competition. Everyone who is ever born is burdened by his own worries and troubles. Who has time for your banter?" - Mankutimma
Video Coming Soon
Detailed video explanations by scholars and experts will be available soon.