Back to List

Kagga 648 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ । ಕರೆಕರೆಯ ಬೇರುಗಳ, ಮನದ ಗಂಟುಗಳ ॥ ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ । ಉರುಳಪ್ಪುದಾತ್ಮಕ್ಕೆ - ಮಂಕುತಿಮ್ಮ ॥ ೬೪೮ ॥

taridu biDu, toredu biDu, toDedu biDu, nenahinda । karekareya bErugaLa, manada ganTugaLa ॥ urake sogasu enisidA prItihAramum orme । uruLappudu Atmakke - Mankutimma ॥ 648 ॥

Meaning in Kannada

ಅಂತರಾತ್ಮಕ್ಕೆ ಮುಜುಗರ ಮಾಡುವಂತಹ ನೆನಪಿನ ಬೇರುಗಳನ್ನು ಮತ್ತು ಗಂಟುಗಳನ್ನು ಅಂತರಾಳದಿಂದ ಕತ್ತರಿಸಿಬಿಡು, ತೊರೆದುಬಿಡು, ಅಳಿಸಿಬಿಡು. ಏಕೆಂದರೆ ಹೃದಯಕ್ಕೆ ಹಿತವೆನಿಸುವಾ ಪ್ರೀತಿ ಪ್ರೇಮಗಳ ಮಾಲೆಯು ಆತ್ಮಕ್ಕೆ ಕೆಲವು ಬಾರಿ ನೇಣಿನಂತೆ ಆಗುವುದು ಎಂದು ಗತವನ್ನು ನೆನೆಯುವ, ಆ ನೆನಪಿನಲ್ಲಿ ಹಿಂಸೆಯನ್ನನುಭವಿಸುವ ನಮ್ಮ ಬದುಕಿನ ವಿಚಾರವನ್ನು ತಿಳಿಗೊಳಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The knots in your mind -severe it, leave it, destroy it from your memories. These are the knots that tie you to various other objects in this world. They are like a garland that looks good on the bosom, but it is a noose around the neck for the soul." - Mankutimma

Themes

LifeMoralityDetachment

Video Section

Video Coming Soon

Detailed video explanations by scholars and experts will be available soon.