Back to List

Kagga 647 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ । ರಕ್ತಿ ವಿಪರೀತವದಕಾಗದಿರೆ ಮುಕ್ತಿ ॥ ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ । ಶಕ್ತಿವಂತನೆ ಮುಕ್ತ - ಮಂಕುತಿಮ್ಮ ॥ ೬೪೭ ॥

muktiyembudu manada samsthitiye, bEralla । rakti viparItavadakAgadire mukti ॥ yuktiyim karaNachEShTitava tiddute shamipa । shaktivantane mukta - Mankutimma ॥ 647 ॥

Meaning in Kannada

ಮುಕ್ತಿಯೆಂಬುದು ಕೇವಲ ಮನಸ್ಸಿನ ಒಂದು ಭಾವವಷ್ಟೆ. ಮುಕ್ತಿಯೆಂದರೆ ಈ ಜಗತ್ತಿನಿಂದ, ಮುಕ್ತಿಯೆಂದಲ್ಲ. ಜಗತ್ತಿನೊಂದಿಗೆ ರಕ್ತಿ ಅಂದರೆ ಅಂಟು ಅಧಿಕವಾಗದಿದ್ದರೆ ಅಥವಾ ಅಂಟೀ ಅಂಟದ ಹಾಗೆ ಜೀವಿಸಲಾದರೆ ಅದೇ ಮುಕ್ತಿ. ಯುಕ್ತಿಯನ್ನು ಉಪಯೋಗಿಸಿ ಇಂದ್ರಿಯಗಳನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಪಡುತ್ತಾ ಮತ್ತು ಅದರ ಮೂಲಕ ಆತ್ಮ ಸಂಸ್ಕಾರಗೊಳ್ಳಲು ಪೂರಕವಾದ ಕೆಲಸ ಮಾಡಲು, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವ್ಯಯಿಸುವವನೇ ಮುಕ್ತ ಎಂದು ಮುಕ್ತಿಗಾಗಿ ನಾವು ಮಾಡಬೇಕಾದ ಪ್ರಯತ್ನವನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The calmness of the mind is the salvation that everyone seeks. Thats it, nothing else. Being free of excessive desires is salvation. He is strong who can restrain his senses (eyes and ears) and correct them when they stray (from the virtuous path)." - Mankutimma

Themes

Peace

Video Section

Video Coming Soon

Detailed video explanations by scholars and experts will be available soon.