Back to List

Kagga 645 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ । ಸಂತಸೋತ್ಸಾಹಗಳೆ ಪಥ್ಯದುಪಚಾರ ॥ ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ । ಎಂತಾದೊಡಂತೆ ಸರಿ - ಮಂಕುತಿಮ್ಮ ॥ ೬೪೫ ॥

chinte santApagaLu manasige virEchakavo । santasa utsAhagaLe pathyada upachAra ॥ intum antum naDeyutiruvudu Atma chikitse । entAdoDante sari - Mankutimma ॥ 645 ॥

Meaning in Kannada

ಮನಸ್ಸಿನಲ್ಲಿ ಗೂಡು ಕಟ್ಟಿರುವ ನೋವು ಮತ್ತು ಹಿಂಸೆಗಳನ್ನು ಹೊರಹಾಕಲು ಚಿಂತೆ ಮತ್ತು ದುಃಖಗಳು ಸಹಾಯಮಾಡುತ್ತವೆ ಮತ್ತು ಅಂತಹ ಮನಸ್ಸನ್ನು ತಿಳಿಯಾಗಿಸಲು ಮದ್ದಿನಂತೆ ಸಂತಸ ಮತ್ತು ಉತ್ಸಾಹಗಳು ಇವೆ. ಹೀಗೆ ದುಃಖವನ್ನು ಹೊರಹಾಕುವುದೋ ಅಥವಾ ಸಂತಸವನ್ನು ಒಳಗೆ ತಂದುಕೊಳ್ಳುವುದೋ, ಹೇಗಾದರೂ ಸರಿ ಎರಡೂ ವಿಧಾನದಲ್ಲಿ ಚಿಕಿತ್ಸೆ ನಡೆದು ಆತ್ಮಕ್ಕೆ ಉಪಚಾರವಾಗಿ ಆತ್ಮ ಉದ್ಧಾರವಾದರೆ ಸರಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The troubles and worries are the cleansers that purify your thoughts. Happiness and joy are like good food that is also prescribed diet. One must alternate between the two options to keep the soul healthy. Just accept what ever comes - trouble, worries, happiness, joy, grief, shock what ever it may be." - Mankutimma

Themes

DeathMoralitySuffering

Video Section

Video Coming Soon

Detailed video explanations by scholars and experts will be available soon.