Mankutimmana Kagga by D.V. Gundappa
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ । ಕೊರತೆಯೊಂದನು ನೀನು ನೆನೆನೆನೆದು ಕೆರಳಿ ॥ ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ । ನರಳುವುದು ಬದುಕೇನೊ? - ಮಂಕುತಿಮ್ಮ ॥ ೬೪೪ ॥
tarachu gAyava keredu huNNagipudu kapi । korateyondanu nInu nene nenedu keraLi ॥ dhareyellavanu shapisi, manadi narakava nilisi । naraLuvudu badukEno? - Mankutimma ॥ 644 ॥
ಮರದಿಂದ ಮರಕ್ಕೆ ಹಾರುವಾಗಲೋ ಅಥವಾ ಯಾವುದೋ ಬೇಲಿಯಲ್ಲಿ ನುಗ್ಗುವಾಗಲೋ ಮುಳ್ಳೋ ಕಲ್ಲೋ ತರಚಿ ಆದ ಒಂದು ಸಾಮಾನ್ಯ ಗಾಯವನ್ನು ಕೆರೆದು ದೊಡ್ಡ ಹುಣ್ಣಾಗಿಸಿ, ರಣವಾಗಿಸಿ ಅತಿಯಾದ ನೋವಿಂದ ಪರದಾಡುವ ‘ಕಪಿ’ ಯಂತೆ, ನೀನು ಯಾವುದೋ ಒಂದು ಕೊರತೆಯನ್ನು ಹಿಡಿದುಕೊಂಡು ಮತ್ತೆ ಮತ್ತೆ ಅದನ್ನೇ ನೆನೆದು, ಕನಲಿ ನಿನ್ನ ಕೊರತೆಗೆ ಜಗತ್ತನ್ನೇ ಕಾರಣವನ್ನಾಗಿಸಿ, ಎಲ್ಲರನ್ನೂ ದೂರಿ, ಮನಸ್ಸಿನಲ್ಲಿ ದುಮ್ಮಾನ ತುಂಬಿಕೊಂಡು ನರಕ ಯಾತನೆಯನ್ನು ಅನುಭವಿಸುವುದೂ ಒಂದು ಬಾಳೇ ? ಎಂದು ನಮ್ಮೆಲ್ಲರ ಸ್ಥಿತಿಯನ್ನು ಎತ್ತಿತೋರುವ ರೀತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
A monkey scratches a simple bruise repeatedly to make it a rotting wound. Just like that you will pick one of your worries and remind yourself again and again, curse the entire world for that, create a hell for yourself in your own mind - finally suffer in that hell. Do you call this life? Learn to let go and move on." - Mankutimma
Video Coming Soon
Detailed video explanations by scholars and experts will be available soon.