Mankutimmana Kagga by D.V. Gundappa
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? । ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ॥ ಏನೊ ಜಿವವನೆಳೆವುದೇನೊ ನೂಕುವುದದನು । ನೀನೊಂದು ಗಾಳಿಪಟ - ಮಂಕುತಿಮ್ಮ ॥ ೬೪೧ ॥
bAnoL iruvude pakShi pArva dAriya nakShe? । mInu nIroLu nusuLe patha niyama ihude? ॥ Eno jIvavanu eLevudu Eno nUkuvudu adanu । nInondu gALipaTa - Mankutimma ॥ 641 ॥
ಆಕಾಶದಲ್ಲಿ ಹಾರುವ ಪಕ್ಷಿಯ ಚಲನಕ್ಕೆ ಒಂದು ನಿರ್ದಿಷ್ಟ ಪಥವಿಲ್ಲ, ಎಂದರೆ ಒಂದು ಮಾರ್ಗವಿಲ್ಲ. ಹಾಗೆಯೇ ಕಡಲಿನಲ್ಲಿರುವ ಮೀನು ಚಲಿಸಲು ಒಂದು ನಿಗದಿತ ಹಾದಿ ಇಲ್ಲ. ಆಯಾಯಾ ದೇಹಗಳನ್ನು ಧರಿಸಿದ ಜೀವವನ್ನು ಒಂದು ಶಕ್ತಿ ಎಳೆಯುತ್ತಾ ನೂಕುತ್ತಾ ಮುಂದಕ್ಕೆ ಮತ್ತು ಹಿಂದಕ್ಕೆ ತಳ್ಳುತ್ತಿರುತ್ತದೆ. ಹಾಗೆಯೇ ನಮ್ಮ ಜೀವನವೂ ಒಂದು ಗಾಳಿಪಟವಿದ್ದಂತೆ. ಕೈಯಲ್ಲಿ ದಾರ ಹಿಡಿದು ಗಾಳಿಪಟವನ್ನು ಹಾರಿಬಿಟ್ಟರೂ ಅದು ಹಾರುವುದು ನಭದಲ್ಲಿನ ಗಾಳಿಯ ಚಲನೆಯನುಸಾರವಾಗಿ. ಹಾಗಾಗಿ ವಿಧಿಯೆಂಬ ಗಾಳಿಯ ಹೊಯ್ದಾಟದ ಅನುಸಾರವಾಗಿ ಹಾರಾಡುವ ಬದುಕನ್ನು ಹೊಂದಿರುವ ನೀನೂ ಒಂದು ಗಾಳಿಪಟದ ರೀತಿ ಎಂದು ನಮ್ಮ ಬದುಕಿನ ಪರಿಯನ್ನು ವಿಶ್ಲೇಷಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Is there a map that the bird follows while flying? Are there path rules that the fish follow while swimming in water? Yet they manage to get from place to place well. Life is like that - a little pull here, a little push there. At the end of it it is all well balanced. One must not try to plan it too well since life changes based on the world around which is very unpredictable. Life is like a kite." - Mankutimma
Video Coming Soon
Detailed video explanations by scholars and experts will be available soon.