Mankutimmana Kagga by D.V. Gundappa
ದಾರಿಗುರಿಗಳ ಗೊತ್ತು ಕಾಗೆಗುಂಟೇನಯ್ಯ । ಆರ ಮನೆ ಸಂಡಿಗೆಯೊ, ಚುಂಡಿಲಿಯೊ, ಹುಳುವೋ ॥ ಆರ ಪಿಂಡವೊ, ಏನೊ, ಎಂತೊ ಆ ಬಾಳ ಗತಿ! । ಮೀರಿದವನೇಂ ನೀನು? - ಮಂಕುತಿಮ್ಮ ॥ ೬೪೨ ॥
dArigurigaLa gottu kAgege unTEnayya । aara mane sanDigeyo, chundiliyo, huLuvO ॥ aara pinDavo, Eno, ento, aa bALa gati! । mIridavanEm nInu? - Mankutimma ॥ 642 ॥
ಕೆಲವರಿಗೆ ಮಾತ್ರ ತಾವು ಮಾಡಬೇಕಾದ ಕೆಲಸದ ಸೂಕ್ತತೆ,ಪ್ರಸ್ತುತತೆ ಅಥವಾ ಅಪ್ರಸ್ತುತತೆಯ ಪೂರ್ವ ಪರಿಚಯ, ಮಾಡುವ ವಿಧಾನ, ಮಾಡುವ ಅಥವಾ ಬಿಡುವ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಅವರು ಪುಣ್ಯವಂತರು. ಮಿಕ್ಕೆಲ್ಲರಿಗೂ ಅದಿಲ್ಲದೆ ಮನಸ್ಸಿಗೆ ಬರುವ ಚಿತ್ರ ವಿಚಿತ್ರ ವಿಚಾರಗಳ ಧಾರಾಪ್ರವಾಹಕ್ಕನುಗುಣವಾಗಿ ಅವರ ಕೆಲಸ ಕಾರ್ಯಕೆಲಸಗಳಿರುತ್ತವೆ. ಒಂದು ನಿರ್ಧಿಷ್ಟವಾದ ದಿಕ್ಕು ಅಥವಾ ದಿಶೆ ಇರುವುದಿಲ್ಲ. ತಾವು ಏತಕ್ಕಾಗಿ ಆ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವುದರ ಅರಿವಿಲ್ಲದೆಯೇ ಸುಖಾಸುಮ್ಮನೆ ಮಾಡುತ್ತಾ ಹೋಗುತ್ತಾರೆ. ಮಾನ್ಯ ಗುಂಡಪ್ಪನವರು ‘ ಮೀರಿದವನೇಂ ನೀನು’ ಎಂದು ಕೇಳುವಂತೆ ನಾವು ಈ ರೀತಿಯ ಬದುಕನ್ನು ಮೀರಲಾಗುವುದಿಲ್ಲ.
Is there a plan and goal for a crow? It just eats some munchies on some house, some mice, some worm, some offering to some ancestor. It does not care where its next meal comes from and makes the most of the present. Such is its life. Is your's any better?" - Mankutimma
Video Coming Soon
Detailed video explanations by scholars and experts will be available soon.