Back to List

Kagga 640 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು । ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ॥ ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು । ಪರದೇಶಿವೊಲು ಬಾಳು - ಮಂಕುತಿಮ್ಮ ॥ ೬೪೦ ॥

tiruka nInu ee brahmapuriyoL ada mareyadiru । siri irdoDEnu? parijana irdoDEnu? ॥ toredella DambhagaLa nIne ninna aaLAgu । paradEshivolu bALu - Mankutimma ॥ 640 ॥

Meaning in Kannada

ಈ ಜಗತ್ತಿನಲ್ಲಿ ನೀನು ಕೇವಲ ಒಬ್ಬ ಭಿಕ್ಷುಕ. ಅದನ್ನು ಮರೆಯಬೇಡ. ಹಣ ಬಲ ಮತ್ತು ಜನ ಬಲವಿದ್ದರೆ ಏನು ಪ್ರಯೋಜನ. ಅದರಿಂದ ಮನದಲ್ಲಿ ಉಂಟಾಗುವ ಎಲ್ಲ ಡಂಬಾಚಾರ ಬೂಟಾಟಿಕೆಗಳನ್ನು ಬಿಟ್ಟು ಎಲ್ಲಿಂದಲೋ ಬಂದ ನೀನು, ನಿನ್ನ ಆತ್ಮಕ್ಕೆ ನೀನೇ ಸೇವಕನಾಗು. ಈ ಜಗತ್ತಿನಲ್ಲಿ ನೀನು ಪರಕೀಯ, ಪರದೇಶಿ. ಹಾಗೆಯೇ ಬಾಳು ಎಂದು ಬದುಕಿಗೆ ನಾವು ಎಷ್ಟರಮಟ್ಟಿಗೆ ಅಂಟಿಕೊಳ್ಳಬೇಕು ಎನ್ನುವದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

You are a mere beggar in this grand universe. Don't you ever forget that. What if you are very rich in your own little world? What if you have too many relative, friends and followers? Renounce all appearances and become your own servant. Live in this world as if you are a traveler just passing through the world. Don't develop attachments." - Mankutimma

Themes

LifeDeathMoralityNatureSociety

Video Section

Video Coming Soon

Detailed video explanations by scholars and experts will be available soon.