Mankutimmana Kagga by D.V. Gundappa
ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ । ಮಾಧ್ವೀಕ ಭಯವಿರದು ಜಾಗರೂಕನಿಗೆ ॥ ದೃಗ್ದೃಶ್ಯಚಿತ್ರಪ್ರಪಂಚದಲಿ ಸೇರಿ ನೀಂ । ಮುಗ್ಧನಾಗದೆ ಸುಖಿಸು - ಮಂಕುತಿಮ್ಮ ॥ ೬೩೯ ॥
mugdhanAgade bhujisu, bhujisalihudanu jagadi । mAdhvIka bhayaviradu jAgarUkanige ॥ dRuk dRushya chitra prapanchadali sEri nIm । mugdhanAgade sukhisu - Mankutimma ॥ 639 ॥
ಈ ಜಗತ್ತಿನಲ್ಲಿ ಅನುಭವಿಸಬೇಕಾದ್ದನ್ನು ಮೋಹವಿಲ್ಲದೆ ಅನುಭವಿಸು. ಮೋಹವಿಲ್ಲದವನಿಗೆ ಅಹಂಕಾರವು ಬಂದು ಅಂಟಿಕೊಳ್ಳುವ ಭಯವಿರದು.ಚಿತ್ರಕಾರನೂ ಚಿತ್ರವೂ ಎರಡೂ ಒಂದೇ ಆಗಿರುವ ಈ ಪ್ರಪಂಚದಲ್ಲಿ ನೀನೂ ಸಹ ಒಂದಾಗಿ ಈ ಜಗತ್ತಿಗೆ ಅಂಟದೆ ಮೋಹವನ್ನು ತೊರೆದು ಸುಖದಿಂದಿರು, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Don't get lost due to attachment. Without getting attached, you are free to savor everything in this world. If you are careful, you don't have to worry about getting lost due to intoxication. This world is full of observer and the observed. Understand that be part of the setup - sometimes as observer and sometimes as the observed. Enjoy the process without being attached." - Mankutimma
Video Coming Soon
Detailed video explanations by scholars and experts will be available soon.