Mankutimmana Kagga by D.V. Gundappa
ನಂಬು ದೇವರ, ನಂಬು, ನಂಬೆನ್ನುವುದು ಲೋಕ । ಕಂಬನಿಯನಿಡುವ ಜನ ನಂಬಲೊಲ್ಲದರೇಂ? ॥ ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? । ತುಂಬು ವಿರತಿಯ ಮನದಿ - ಮಂಕುತಿಮ್ಮ ॥ ೬೩೮ ॥
nambu dEvara, nambu, nambennuvudu lOka । kambaniyanu iDuva jana nambalolladarEm? ॥ hambalane toredange nambikeya hangEke? । tumbu viratiya manadi - Mankutimma ॥ 638 ॥
ಜಗತ್ತೆಲ್ಲ ‘ ದೇವರನ್ನು ನಂಬು, ನಂಬಿ ಕೆಟ್ಟವರಿಲ್ಲವೋ, ದೇವರು ನಂಬಿದವರ ಕೈಬಿಡನು’ ಎಂದೆಲ್ಲಾ ಹೇಳುತ್ತದೆ. "ಆದರೆ ತೀರ ಕಷ್ಟದಲ್ಲಿ ಇದ್ದು ಕಣ್ನೀರಿಡುವ ಜನರೇಕೆ ದೇವರನ್ನು ನಂಬುವುದಿಲ್ಲ. ಆಸೆಯನ್ನು ಬಿಟ್ಟವನಿಗೆ ನಂಬಿಕೆಯ ಹಂಗು ಏಕೆ? ನೀನೂ ಸಹ ಈ ನಂಬಿಕೆಯ ವೃತ್ತದಿಂದ ಹೊರಬರಬೇಕಾದರೆ ನಿನ್ನ ಮನಸ್ಸಿನಲ್ಲಿ ವಿರಕ್ತಿಯನ್ನು ತುಂಬಿಕ"’ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
The world insists that we believe in God. It almost forces to do so. But there are so many people who are sad. Do they not believe in God? But if a person has given up his desires, then what has he got to gain by believing in God? Fill your mind with thought that help you kill your desires." - Mankutimma
Video Coming Soon
Detailed video explanations by scholars and experts will be available soon.