Mankutimmana Kagga by D.V. Gundappa
ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು । ಸರಿತಪ್ಪುಗಳಿಗಂತು, ಜಾಣ್ ಬೆಪ್ಪುಗಳ್ಗಂ ॥ ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ । ಪರವೆಯೆಂತಾದೊಡೇಂ? - ಮಂಕುತಿಮ್ಮ ॥ ೬೩೭ ॥
siri daridrategaLge phaladoLu antara kiridu । saritappugaLigantu, jAN beppugaLgam ॥ maraNavellavanu onde teradi musukuvudu endo । parave yentAdoDEm? - Mankutimma ॥ 637 ॥
ಸಿರಿತನ ಮತ್ತು ಬಡತನದ ಬದುಕಿನ ಫಲದ ನಡುವೆ ಅಂತರ ಬಹಳ ಕಿರಿದು, ಹಾಗೆಯೇ ಸರಿ ತಪ್ಪುಗಳ ನಡುವೆಯೂ ಮತ್ತು ಜಾಣತನ ಮತ್ತು ಹೆಡ್ಡತನದ ನಡುವೆಯೂ ಅಂತರ ಬಹಳ ಕಡಿಮೆ. ಸಿರಿವಂತ, ಬಡವ, ಜಾಣ, ಪೆದ್ದ, ತಪ್ಪು ಮಾಡಿದವನು ಅಥವಾ ಮಾಡದವನು ಹೀಗೆ ಸಕಲರನ್ನೂ ಮೃತ್ಯು ಒಂದೇ ರೀತಿಯಲ್ಲಿ, ಯಾವ ಭೇದವನ್ನೂ ಮಾಡದೆ ಆವರಿಸುತ್ತದೆ ಕವಿಯುತ್ತದೆ. ಹಾಗಾಗಿ ಈ ದ್ವಂದ್ವಗಳ ನಡುವಿನ ಅಂತರದ ಮತ್ತು ಅದರಿಂದುಂಟಾಗುವ ಫಲವ್ಯತ್ಯಯದ ಬಗ್ಗೆ ನೀನು ಚಿಂತಿಸಬೇಡ ಎನ್ನುವಂತಹ ವಿವೇಕದ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
There is little difference between being rich or poor in the final outcome. Right or wrong, smart or stupid have the same difference at the end. Death will treat them all same. Why does one have to worry so much? (about individual decisions)" - Mankutimma
Video Coming Soon
Detailed video explanations by scholars and experts will be available soon.