Mankutimmana Kagga by D.V. Gundappa
ಸಾಸಿರದ ಯುಕ್ತಿ ಸಾಹಸವ ನೀನೆಸಗುತಿರು । ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ॥ ಶೇಷ ನಿನಗುಳಿವುದೆಂತಾದೊಡಂ ನೋವಿನಿತು । ಸೈಸದನು ನೀನಳದೆ - ಮಂಕುತಿಮ್ಮ ॥ ೬೩೬ ॥
sAsirada yukti sAhasava nInu esagutiru । lEsu phala dorege ninnella pauruShakam ॥ shESha ninge uLivudu entADoDam nOvu initu । saisadanu nIn aLade - Mankutimma ॥ 636 ॥
ಬದುಕಿನ ಬವಣೆಯನ್ನು ಎದುರಿಸಲು ಮತ್ತು ಸಂದ ಕರ್ಮಫಲವನ್ನು ಅನುಭವಿಸಲು ನೀನು ಸಾವಿರಾರು ಯುಕ್ತಿಯನ್ನು ಮಾಡು. ಅಂತಹ ಪ್ರಯತ್ನದಿಂದ ನಿನಗೆ ಒಳ್ಳೆಯ ಫಲ ದೊರಕಿ ಪಾಪಕರ್ಮದ ಫಲವು ಕಡಿಮೆಯಾದರೂ ಒಂದಿಷ್ಟು ನೋವು ಮನದ ಮೂಲೆಯಲ್ಲೆಲ್ಲೋ ಉಳಿದಿರುತ್ತದೆ. ಅದನ್ನು ಸಹಿಸಿಕೊಂಡು ಬಾಳು ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You should continue to implement thousand ideas of adventure. If your efforts pay off - well and good. Yet, you will still be left with some failures and some pain. You should endure it without lamenting." - Mankutimma
Video Coming Soon
Detailed video explanations by scholars and experts will be available soon.