Back to List

Kagga 635 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? । ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ॥ ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? । ಸಿದ್ಧವಿರು ಸೈರಣೆಗೆ - ಮಂಕುತಿಮ್ಮ ॥ ೬೩೫ ॥

guddaliyinAdIte male kaNive samada nela? । maddu taDevude muppu kaLLanavol amare? ॥ yuddha tApade shAnti shIta lateyu udisIte? । siddhaviru sairaNege - Mankutimma ॥ 635 ॥

Meaning in Kannada

ಮಣ್ಣನ್ನು ಅಗೆಯಲು ಉಪಯೋಗಿಸುವ ಗುದ್ದಲಿಯಿಂದ ದೊಡ್ಡ ಬೆಟ್ಟ ಮತ್ತು ಕಣಿವೆಯನ್ನು ಅಗೆದು ನೆಲ ಸಮ ಮಾಡಲಾದೀತೇ? ನಮ್ಮ ಅರಿವಿಗೆ ಬಾರದಂತೆ ಕಳ್ಳನಂತೆ ನಮ್ಮ ಮೇಲೆ ಎರಗಿದ ಮುಪ್ಪನ್ನು, ಯಾವುದಾದರೂ ಔಷದಿಯನ್ನು ಕುಡಿದು ವೃದ್ಧಾಪ್ಯ ಬರುವುದನ್ನು ತಡೆಯಲಾಗುವುದೇ? ಕದನದಲ್ಲಿ ಶಾಂತಿ ಮತ್ತು ತಣ್ಣನೆಯ ವಾತಾವರಣ ಉದ್ಭವವಾಗುವುದೇ? ಹಾಗೆಯೇ ಬದುಕಿನಲ್ಲಿ ನಡೆಯುವುದನ್ನು ಬದಲಾಯಿಸಲು ಸಾಧ್ಯವಿಲ್ಲ. ತಾಳ್ಮೆಯಿಂದ ಅನುಭವಿಸುವುದನ್ನು ಹೊರತು ನಿನಗೆ ಬೇರೆ ದಾರಿಯಿಲ್ಲ ಎನ್ನುವ ಬುದ್ಧಿವಾದವನ್ನು ಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Can the mountains and valleys be made plains with just a pickax? Can any medicine stop old age that ambushes like a thief? Can the cool creeper of peace come up amidst the heat of war? One has to patiently wait for (or wait it out) times to change. Be prepared for that." - Mankutimma

Themes

WarPeace

Video Section

Video Coming Soon

Detailed video explanations by scholars and experts will be available soon.