Mankutimmana Kagga by D.V. Gundappa
ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ । ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ॥ ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ । ಯಿದ್ದೆಯಿರುವುದು ನಮಗೆ - ಮಂಕುತಿಮ್ಮ ॥ ೬೩೪ ॥
yuddhavAgali rAjyavidye yAgali shAstra । vRuddhiyAgali narana haNeyina aLiyisadA ॥ kShudra kArpaNyada anyAyada anitu initu uLikeyu । idde yiruvudu namage - Mankutimma ॥ 634 ॥
ವಿಧಾತನೊಂದಿಗೆ ಹೋರಾಡಿ ಅಥವಾ ಯುದ್ಧಮಾಡಿಯಾಗಲೀ ಅಥವಾ ಹಲವು ಶಾಸ್ತ್ರಗಳನ್ನು ಅಭ್ಯಾಸಮಾಡಿ ಜ್ಞಾನವಂತನಾಗುವುದರಿಂದಾಗಲೀ, ಹಣೆಯ ಬರಹವನ್ನು ಅಳಿಸಲು ಸಾಧ್ಯವೇ ಇಲ್ಲ. ಎಲ್ಲವನ್ನೂ ತೊಳೆದಂತೆ ಅಥವಾ ಅಳಿಸಿದಂತೆ ಕಂಡರೂ ನಮ್ಮ ಸಣ್ಣತನದ, ಅಜ್ಞಾನದ, ಜ್ಞಾನದ ಕಾರ್ಪಣ್ಯ, ಎಂದರೆ ಅರಿವಿನ ಬಡತನ, ಕಳ್ಳತನದ, ಮೋಸಮಾಡುವಂತಹ ಕ್ಷುದ್ರ ಬುದ್ದಿಗಳ ಕಿಂಚಿತ್ ಉಳಿಕೆ ನಮ್ಮಲ್ಲಿ ಇದ್ದೇ ಇರುತ್ತದೆ. ಅದನ್ನು ಸಂಪೂರ್ಣ ತೊಡೆದುಹಾಕುವುದಕ್ಕೆ ಆಗುವುದೇ ಇಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
One may try to set all the things wrong right - by war, by diplomacy, my knowledge. But one can not erase all results of one's action. Some traces of hunger, misery, injustice will remain for us as burden." - Mankutimma
Video Coming Soon
Detailed video explanations by scholars and experts will be available soon.