Back to List

Kagga 631 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸರಿಗೆಪಂಚೆಯೊ ಹೊದಿಕೆ, ಹರಕುಚಿಂದಿಯೊ ಮೈಗೆ । ಪರಮಾನ್ನ ಭೋಜನವೊ, ತಿರುಪೆಯಂಬಲಿಯೋ ॥ ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ । ಕರುಬು ಕೊರಗೇತಕೆಲೊ - ಮಂಕುತಿಮ್ಮ ॥ ೬೩೧ ॥

sarige pancheyo hodike, haraku chindiyo maige । paramAnna bhOjanavo, tirupeya ambaliyO ॥ pariNAmadali dhanika baDavaru irvarum onde । karubu koragEtakelo - Mankutimma ॥ 631 ॥

Meaning in Kannada

ರೇಶಿಮೆಯ ಪಂಚೆಯನ್ನು ಉಟ್ಟರೂ, ಹರಿದ ಚಿಂದಿಯನ್ನು ಉಟ್ಟರೂ ಪರಿಣಾಮ ಒಂದೇ ಮತ್ತು ಪರಮಾನ್ನವನ್ನು ಉಂಡರೂ, ಭಿಕ್ಷೆಯೆತ್ತಿ ಗಂಜಿಯನ್ನು ಕುಡಿದರೂ ಪರಿಣಾಮ ಒಂದೇ. ಹಾಗಾಗಿ ‘ನಿನ್ನ ಬಳಿ ಏನೇ ಇದ್ದರೂ ಅಥವಾ ಇರದಿದ್ದರೂ ಕೊರಗದೆ ಬದುಕು’ ಎಂದು ಬದುಕಿನಲ್ಲಿ ಸಂತೋಷದ ಹಾದಿಯನ್ನು ತೋರಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

A rich person may have a silk cloth with embroidery to wear over his body. A poor person may wear just rags. They may eat multi course meals and collected alms respectively. But in the final analysis, both end in the same fate - death. Even after knowing this, why do you feel jealous and worry?" - Mankutimma

Themes

DeathFateSufferingWar

Video Section

Video Coming Soon

Detailed video explanations by scholars and experts will be available soon.