Mankutimmana Kagga by D.V. Gundappa
ಕಿವುಡುತನ ತಪ್ಪೀತೆ ರನ್ನ ಕುಂಡಲದಿಂದ? । ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ॥ ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ । ಜವರಾಯ ಸಮವರ್ತಿ - ಮಂಕುತಿಮ್ಮ ॥ ೬೩೨ ॥
kivuDutana tappIte ranna kunDaladinda? । tovalu jabbalu biLade mRuShTAnnadinda? ॥ bhuviya pariNAmadali siri baDatanagaLu onde । javarAya samavarti - Mankutimma ॥ 632 ॥
ಕಿವಿಯಲ್ಲಿ ರತ್ನದ ಕುಂಡಲಗಳನ್ನು ಧರಿಸಿದರೆ ಇರುವ ಕಿವುಡುತನ ತಪ್ಪೀತೆ? ಕೇವಲ ಮೃಷ್ಟಾನ್ನವನ್ನು ತಿಂದರೆ ದೇಹ ಪ್ರಾಯ ಸಂದಂತೆ ಜೋತು ಬೀಳುವುದು ತಪ್ಪೀತೆ? ಭೂಮಿಯಲ್ಲಿನ ಪ್ರಕೃತಿಗೆ ಅನುಗುಣವಾಗಿ ಆಗುವ ಪರಿಣಾಮಗಳಿಗೆ ಬಡವ-ಬಲ್ಲಿದನೆಂಬ ಬೇಧವಿರುವುದಿಲ್ಲ. ಎಲ್ಲರ ಬದುಕನ್ನೂ ಸಮನಾಗಿ ಕೊನೆಗಾಣಿಸುವ ಆ ಯಮರಾಯ ಸಮವಾಗಿ ವರ್ತಿಸುತ್ತಾನೆ ಎಂದು ಬದುಕಿನ ಪರಮ ಸತ್ಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Will the ear not go deaf over time by wearing a gem studded ear piece? Can good food stop the skin from developing wrinkles over age? In the effects of the world on the body, there is no difference between the rich and the poor. Death is the final leveler." - Mankutimma
Video Coming Soon
Detailed video explanations by scholars and experts will be available soon.