Back to List

Kagga 630 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸ್ಥೂಲಸೂಕ್ಷ್ಮ ವಿವೇಕರಹಿತೇಷ್ಟ ಬಂಧುಜನ । ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ॥ ಸಾಲವನು ನಿನ್ನಿಂದ ಸಲಿಸಕೊಳಬಂದವರು । ತಾಳುಮೆಯಿನವರೊಳಿರು - ಮಂಕುತಿಮ್ಮ ॥ ೬೩೦ ॥

sthUla sUkShma vivEka rahita iShTa bandhu jana । kAla damShTrake ninna mRudugoLipa bhaTaru ॥ sAlavanu ninninda salisikoLa bandavaru । tALumeyina avaroL iru - Mankutimma ॥ 630 ॥

Meaning in Kannada

ವಿಷಯಗಳ ಸೂಕ್ಷ್ಮತೆ ಮತ್ತು ಸ್ಥೂಲತೆಯನ್ನು ಅರಿಯದೆ ನಮ್ಮೊಡನೆ ನಡಕೊಳ್ಳುವ ನಮ್ಮ ಬಂಧು ಮಿತ್ರರು ಕಾಲನ ಕರೆಗೆ ನಮ್ಮನ್ನು ಅಣಿಗೊಳಿಸುತ್ತಾರೆ. ನಾವು ಜನ್ಮ ಜನ್ಮಾಂತರದಲ್ಲಿ ಬಹುಜನರಿಂದ ಪಡೆದ ಸಾಲವನ್ನು ಹಿಂತಿರುಗಿ ಪಡೆಯಲು ಬಂದವರೇ ಇವರೆಲ್ಲ. ಹಾಗಾಗಿ ಇವರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರು ಎಂದು ಪರರ ವ್ಯವಹಾರದಿಂದ ನಮ್ಮ ಮೇಲೆ ಆಗುವ ಪ್ರಭಾವವನ್ನು ಎದುರಿಸುವ ಪರಿಯನ್ನು ಭೋಧಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Your relatives and friends may not be always nice to you. They will treat you badly once in a while. They are the faithful soldiers of time who soften you before pushing you into its mouth as food. They are only extracting a previous debt from you - just like you would be doing from them in a different circumstance. You must be patient with them." - Mankutimma

Themes

DevotionDeathSociety

Video Section

Video Coming Soon

Detailed video explanations by scholars and experts will be available soon.