Mankutimmana Kagga by D.V. Gundappa
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು । ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ॥ ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು । ಗಟ್ಟಿ ಪುರುಳೇನಲ್ಲ - ಮಂಕುತಿಮ್ಮ ॥ ೬೨೫ ॥
keTTa prapanchavidu, suTTa kari naramanasu । biTTu biDalaridadanu, kaTTikoLe maShTu ॥ muTTi muTTadavOl upAyadim nODadanu । gaTTi puruLenalla - Mankutimma ॥ 625 ॥
ಈ ಪ್ರಪಂಚ ಕೆಟ್ಟ ಪ್ರಪಂಚ. ಇಂತಹ ಕೆಟ್ಟ ಪ್ರಪಂಚದಲ್ಲಿ ಮನವೆಲ್ಲ ಸುಟ್ಟು ಕರಕಲಾದರೂ ಇದನ್ನು ಬಿಟ್ಟು ಬಿಡಲಾಗದೆ ಕೊಳೆ ಮತ್ತು ರಾಡಿಯನ್ನು ತುಂಬಿಕೊಳ್ಳುತ್ತಾನೆ ಮನುಷ್ಯ. ಇಲ್ಲಿ ಇದ್ದೂ ಇಲ್ಲದಹಾಗೆ ಉಪಾಯದಿಂದ ಬದುಕಬೇಕು. ಈ ಜಗತ್ತು ಬಿಡಲಾಗಲಾರದಂತಹ ಗಟ್ಟಿ ವಸ್ತುವೇನಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
This is a bad world. By living in this world, man's mind has become dark like charcoal. But you can leave it alone by itself. The more you touch it, it more dirty you get. The right way to deal with it is to touch it - very lightly, as if you have not. There is nothing great in this art." - Mankutimma
Video Coming Soon
Detailed video explanations by scholars and experts will be available soon.