Back to List

Kagga 624 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹತ್ಯೆಯೋ ಹನ್ಯತೆಯೊ ವಿಜಯವೋ ಪರಿಭವವೊ । ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ॥ ಕೃತ್ಯನಿರ್ಣಯ ಬಾಹ್ಯಲಾಭನಷ್ಟದಿನಲ್ಲ । ಆತ್ಮಋಣವದು ಜಗಕೆ - ಮಂಕುತಿಮ್ಮ ॥ ೬೨೪ ॥

hatyeyO hanyateyo vijayavO paribhavavo । kShatriyam svArthamam gaNisuvane raNadoL? ॥ kRutyanirNaya bAhya lAbha naShTadinalla । Atma RuNavadu jagake - Mankutimma ॥ 624 ॥

Meaning in Kannada

ಕೊಲ್ಲುವುದೋ, ಕೊಲ್ಲಲ್ಪಡುವುದೋ, ಗೆಲುವೋ, ಸೋಲೋ ಎಲ್ಲದಕ್ಕೂ ಸಿದ್ಧನಾಗಿರುವ ಕ್ಷತ್ರಿಯ, ಯುದ್ಧದಲ್ಲಿ ಹೋರಾಡುವಾಗ ಅವುಗಳಾವುದನ್ನೂ ಲೆಕ್ಕಿಸುವುದಿಲ್ಲ. ಅವನ ಹೋರಾಟದಲ್ಲಿ ಸ್ವಾರ್ಥಕ್ಕೆ ಸ್ಥಾನವೇ ಇಲ್ಲ. ಹೋರಾಡುವುದಷ್ಟೇ ಅವನ ಅನನ್ಯ ಧರ್ಮವಾಗಿರುತ್ತದೆ. ಹಾಗೆಯೇ ನಾವು ಮಾಡಬೇಕಾದ ಕರ್ತವ್ಯದ ಕಾರಣ ಕೇವಲ ನಾವು ಈ ಜಗತ್ತಿಗೆ ತೀರಿಸಬೇಕಾದ ಋಣವಾಗಿರುತ್ತದೆ, ಲಾಭ ನಷ್ಟಗಳ ಲೆಕ್ಕಾಚಾರವಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

A soldier does not care for the result when he is on the battle field - killing or being killed, victory or defeat. He has no selfish agenda to be achieved during the war. His actions are not determined by calculations of profit or loss in the outside world. He is just repaying the debt of his soul to the world. We should approach life like that." - Mankutimma

Themes

LifeDeathSelfLoveWar

Video Section

Video Coming Soon

Detailed video explanations by scholars and experts will be available soon.