Back to List

Kagga 623 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ । ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ॥ ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ । ಸಹಕರಿಪುದಲೆ ಧರ್ಮ - ಮಂಕುತಿಮ್ಮ ॥ ೬೨೩ ॥

gRuhadi rAShTradi samAjadi lOkasangatadi । vihitada sthAnadim sahajaguNabaladinda ॥ iha para samanvayade sarvahita samsthitige । sahakaripudale dharma - Mankutimma ॥ 623 ॥

Meaning in Kannada

ನಿನಗೆ ನಿನ್ನ ಹುಟ್ಟಿನಿಂದಲೇ ಒಂದು ಸ್ಥಾನ ಮತ್ತು ಆ ಸ್ಥಾನಕ್ಕೆ ವಿಧಿತವಾದ ಒಂದು ಧರ್ಮವಿದೆ. ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಮತ್ತು ಲೋಕದಲ್ಲಿ ನಿನಗೆ ಲಭಿಸಿರುವ ಸ್ಥಾನದಿಂದ ಮತ್ತು ಜನ್ಮಾಂತರಗಳಿಂದ ಸಂಚಿತ ಗುಣಗಳಿಂದ ನೀನು ಇಲ್ಲಿನ ಬದುಕು ಮತ್ತು ಪರಮಾರ್ಥದ ನಡುವೆ ಒಂದು ಸಮನ್ವಯವನ್ನು ಕಂಡುಕೊಳ್ಳುವುದೇ ಧರ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

At all levels - home, nation, society, world - one must do what ever he can to preserve the well being of all. While doing so one must balance the duties of this world and the next. Being of help to run this world is the real meaning of Dharma" - Mankutimma

Themes

LifeMoralitySociety

Video Section

Video Coming Soon

Detailed video explanations by scholars and experts will be available soon.