Back to List

Kagga 622 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಧರ್ಮನಿರ್ಣಯ ನಿನಗೆ ಜನ್ಮಜನ್ಮಾಂತರದ । ಕರ್ಮಸಂದರ್ಭದಿಂದೊಗೆವುದದನರಿತು ॥ ನಿರ್ಮಮದ ನಿರ್ಮಲೋತ್ಸಹದೆ ನೀನಾಚರಿಸೆ । ಬ್ರಹ್ಮಸಾಮೀಪ್ಯವೆಲೊ - ಮಂಕುತಿಮ್ಮ ॥ ೬೨೨ ॥

dharmanirNaya ninage janma janmaantarada । karma sandharbhadinda ogevudu adanaritu ॥ nirmamada nirmalOtsahade nInAcharise । brahma sAmIpyavelo - Mankutimma ॥ 622 ॥

Meaning in Kannada

ನಿನಗೆ ನಿನ್ನ ಸ್ವಭಾವ, ಎಂದರೆ ಧರ್ಮ, ಜನ್ಮಜನ್ಮಾಂತರದ ಕರ್ಮ ಸಂಬಂಧದಿಂದ ಉಂಟಾಗಿರುತ್ತದೆ. ಅದನ್ನು ಅರಿತು, ಪ್ರಕೃತಿ ಸಂಬಂಧದಿಂದ ಉಂಟಾಗುವ ಮಮಕಾರ ಮತ್ತು ಮಾನಸಿಕ ಹೊಲಸನ್ನು ಸ್ವ ಇಚ್ಚೆಯಿಂದ ಉತ್ಸಾಹದಿಂದ ತೊರೆದು ತೊಳೆದುಕೊಂಡರೆ, ಶುದ್ಧನಾಗಿ ಬ್ರಹ್ಮ ಸಾಮೀಪ್ಯವನ್ನು ಪಡೆಯಬಹುದು ಎಂದು ಮೋಕ್ಷದ ಹಾದಿಯನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The results of your action are to dependent on your actions from previous births and has to be seen with the right context. Once you understand this, you will observe the happenings in your life with detachment and that will help you experience pure joy. That is as close as you can get to God." - Mankutimma

Themes

DevotionWisdomLifeDeathMoralityDetachmentSociety

Video Section

Video Coming Soon

Detailed video explanations by scholars and experts will be available soon.