Back to List

Kagga 621 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಧರಿಸಿರ್ಪುದಲ ಧರ್ಮ? ಧರಿಸು ಜೀವನಧುರವ । ಚರಿಸು ಲೋಕದ ಮಾರ್ಗಗಳಲಿ ಹಿತವರಿತು ॥ ಸರಿಪಡಿಸಿ ದಾರಿಗಳ ಕೆರೆ ತೋಪು ಸತ್ರಗಳ । ನೆರವಾಗು ಪಯಣಕ್ಕೆ - ಮಂಕುತಿಮ್ಮ ॥ ೬೨೧ ॥

dharisirpudala dharma? dharisu jIvana dhurava । charisu lOkada mArgagaLali hitavaritu ॥ saripaDisi dArigaLa kere tOpu satragaLa । neravAgu payaNakke - Mankutimma ॥ 621 ॥

Meaning in Kannada

ಜಗತ್ತಿನ ಎಲ್ಲವನ್ನೂ ಧರ್ಮವು ಧರಿಸಿಹುದಲ್ಲವೇ? ನೀನು ಜೀವನವೆಂಬ ನೊಗವನ್ನು ಹೊತ್ತು, ಹಿತವನ್ನು ಅರಿತು ಲೋಕದ ಮಾರ್ಗಗಳಲ್ಲಿ ನಡೆ. ಮಾರ್ಗದಲ್ಲಿ, ಸುಗಮವಾದ ಪಯಣಕ್ಕೆ ತೊಡಕುಗಳಿರುವ ಮಾರ್ಗ, ಕೆರೆ, ತೋಪು, ಸತ್ರಗಳನ್ನು ಸರಿಪಡಿಸಿ, ನಿನ್ನ ಮತ್ತು ಜಗತ್ತಿನ ಅನ್ಯರ ಪ್ರಯಾಣಕ್ಕೆ ನೆರವಾಗು ಎಂದು ಹೇಳುತ್ತಾ, ನಾವು ಸಮಾಜಮುಖಿಯಾಗಿ ಹೇಗಿರಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Don't they say that Dharma protects everybody? Believe in it. Carry the yoke of this worldly life, and carry it well. Tread the paths of this world - whichever you feel good. As you go, repair the paths, lakes, and rest houses along the way. Make yourself useful to the world while you are here." - Mankutimma

Themes

LifeMoralitySelfPeace

Video Section

Video Coming Soon

Detailed video explanations by scholars and experts will be available soon.