Back to List

Kagga 626 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕುಸುಮಸಖನೇಂ ನೀನು? ಹಿಸುಕದೆಯೆ ಮೂಸದನು । ಹಿಸುಕೆ ಕಟುಕಂಪು; ನರಲೋಕವದರವೋಲೇ ॥ ಗಸಿಯ ಕಲಕದೆ ಕೊಳದ ಮೇಲ್ತಿಳಿಯ ಕುಡಿದು ನಡೆ । ಹಸನು ಹಗುರದ ಬಾಳು - ಮಂಕುತಿಮ್ಮ ॥ ೬೨೬ ॥

kusuma sakhanEm nInu? hisukadeye mUsadanu। hisuke kaTukampu; naralOkavu adaravOlE ॥ gasiya kalakade koLada mEltiLiya kuDidu naDe । hasanu hagurada bALu - Mankutimma ॥ 626 ॥

Meaning in Kannada

ನೀನು ಕುಸುಮಗಳ ಮಿತ್ರನಾದರೆ ಅವುಗಳನ್ನು ಹಿಸುಕದೆ, ಕೇವಲ ಅವುಗಳ ಸುಗಂಧವನ್ನು ಮಾತ್ರ ಆಘ್ರಾಣಿಸು. ಹಿಸುಕಿದರೆ ಸುಗಂಧದ ಬದಲು ಕಡು ಕಮುಟು ವಾಸನೆ ಬರುತ್ತದೆ. ಈ ಜಗತ್ತೂ ಹಾಗೆಯೇ. ಬದುಕಿನ ಅಂತರಾಳದಲ್ಲಿ ಭಾವಗಳ ಮತ್ತು ಅನುಭವಗಳ ರಾಡಿ ಅಡಗಿದೆ. ಅದನ್ನು ಕಲಕದೆ, ರಾದಿಯಿರುವ ಕೊಳದ ತಿಳಿ ನೀರನ್ನು ಕೊಳದ ತಿಳಿ ನೀರನ್ನು ಕುಡಿಯುವಂತೆ, ಬದುಕಿನಲ್ಲಿ ತೀರ ಆಳಕ್ಕೆ ಇಳಿಯದೆ ಹಗುರವಾಗಿ ಹಸನಾದ ಬಾಳನ್ನು ಬಾಳು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

If you are a flowers you would know that you should smell them without holding them too tight. If you crush them, the fragrance turns into a stink. One must deal with this world like wise. Just like we should drink the clear water from the top of the lake without disturbing the sediment at the bottom, life is happy if dealt with lightly." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.