Mankutimmana Kagga by D.V. Gundappa
ಭೌತವಿಜ್ಞಾನಿ ರವಿತಾರೆಧರೆಗಳ ಚಲನ । ರೀತಿ ವೇಗವನೆಳೆದು ಶಕ್ತಿಗಳ ಗುಣಿಪನ್ ॥ ಪ್ರೀತಿ ರೋಷಗಳನವನಳೆವನೇನ್? ಅವ್ಯಕ್ತ । ಚೇತನವನರಿವನೇಂ? - ಮಂಕುತಿಮ್ಮ ॥ ೬೨ ॥
bhauta vijnAni ravi tAre dharegaLa chalana । rIti vEgavanu aLedu shaktigaLa guNipan ॥ prIti rOShagaLanu avanu aLevanEn? avyakta । chEtanavanu arivanEm? - Mankutimma ॥ 62 ॥
ಭೌತವಿಜ್ಞಾನಿಯು ಸೂರ್ಯ ನಕ್ಷತ ಭೂಮಿಗಳ ತಿರುಗುವ ಸುಡುವ ಪ್ರಭಾವ ಬೀರುವ ಶಕ್ತಿಗಳ ಗುಣಾಕಾರ ಭಾಗಾಕಾರ ಲೆಕ್ಕಾಚಾರವನ್ನು ಮಾಡುತ್ತಾನೆ. ಆದರೆ ಮಾನವ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿ ದ್ವೇಷ ರೋಷಗಳ ಶಕ್ತಿಯನ್ನು ಅಳೆಯುತ್ತಾನೆಯೇ? ಸಕಲ ಸೃಷ್ಟಿಯನ್ನೂ ಒಂದು ಸೂತ್ರದಲ್ಲಿ ಹೆಣೆದು ಅದರ ಗತಿ ವಿಧಿಗಳನ್ನು ನಿಯಂತ್ರಿಸುವ ಆ ಬೃಹತ್ ಚೇತನವನ್ನು ಅವನಿಂದ ಅರಿಯಲು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
Physicist may very well observe the trajectory and speed of the Sun, stars and earth and know their strengths. Can he measure the feelings like love and anger? Can he know any details of any energy that do not physical manifestations? [Trasnslator's note: Science can only go so far in explaining the universe. The conscience mind is still a mystery to any branch of science.] - Mankutimma
Video Coming Soon
Detailed video explanations by scholars and experts will be available soon.