Mankutimmana Kagga by D.V. Gundappa
ನಕ್ಷತ್ರಮಂಡಲದಿನಾಚೆಯಿಂದೊಂದು ದನಿ । ವಕ್ಷೋಗುಹಾಂತರದಿನೊಂದು ದನಿಯಿಂತೀ ॥ ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ । ಪ್ರೇಕ್ಷೆ ಪರಬೊಮ್ಮನದು - ಮಂಕುತಿಮ್ಮ ॥ ೬೧ ॥
nakShatra manDaladina Acheinda ondu dani । vakSho guhAntaradinondu daniyantI ॥ sAkShidvayavu ninnoLu ondugUDidoDadE । prEkShe parabommanadu - Mankutimma ॥ 61 ॥
ನಕ್ಷತ್ರ ಮಂಡಲದ ಆಚೆಯಿಂದ ಒಂದು ದನಿ, ವಕ್ಷ ಗುಹಾಂತರದಿಂದ ಒಂದು ದನಿಯಂತೆ ಈ ಸಾಕ್ಷಿ ದ್ವಯವು ನಿನ್ನೊಳಗೆ ಒಂದು ಗೂಡಿದೊಡೆ ಅದೇ ಪರ ಬ್ರಹ್ಮನ ದರ್ಶನವನ್ನು ನೀಡುತ್ತದೆ ಎಂಬುದೇ ಈ ಕಗ್ಗದ ಹೂರಣ.
There is a voice that seems to come from beyond the constellations of stars (all the external influences to our intellect). There is one voice that rises from deep inside our heart (as a result of deep contemplation). When we can resolve this duality and unify them into one, we will see God. - Mankutimma
Video Coming Soon
Detailed video explanations by scholars and experts will be available soon.