Back to List

Kagga 63 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? । ಅರಿಯದದು ನಮ್ಮೆದೆಯ ಭಾವಗಳನೊರೆಯೆ ॥ ಪರಮಾನುಭವಗಳುಲಿಯನುಭವಿಗಳೊಳಕಿವಿಗೆ । ಒರಟುಯಾನವೊ ಭಾಷೆ - ಮಂಕುತಿಮ್ಮ ॥ ೬೩ ॥

narabhAshe baNNipude parasattva rUpavanu? । ariyadadu nammedeya bhAvagaLanoreye ॥ paramAnubhavagaLa uliyu anubhavigaLa oLakivige । oraTuyAnavo bhAShe - Mankutimma ॥ 63 ॥

Meaning in Kannada

ನಾವಾಡುವ ನರಭಾಷೆಗೆ ಒಂದು ಮಿತಿ ಇದೆ. ಈ ಭಾಷೆಯಲ್ಲಿ ಆ ಪರಮಾತ್ಮ ಸ್ವರೂಪವನ್ನು ಬಣ್ಣಿಸಲು ಸಾಧ್ಯವಿಲ್ಲ. ನಮ್ಮ ಅಂತರಂಗದ ಭಾವವನ್ನು ಹೇಳಲು ಈ ಭಾಷೆ ಸಾಲದು. ಪರತತ್ವದ ಅನುಭವದ ಮಾತುಗಳು ಕೇವಲ ನಮ್ಮ ಒಳಗಿವಿಗೆ ಕೇಳಿಸುತ್ತದೆ. ಮಾನವರ ಭಾಷೆಯಲ್ಲಿ ವಿವರಿಸುವುದು ಒಂದು ನೇರವಲ್ಲದ ಸುಗಮವಲ್ಲದ ಪ್ರಯಾಣದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

Is any human language adequate enough to describe the form of the universal being (God)? Can it even describe our feelings in our hearts? If we intend to make our inner ears (of our minds) listen to words describing the extraordinary experiences, the human language comes up as coarse and highly inadequate. - Mankutimma

Themes

DevotionLifeDeathLove

Video Section

Video Coming Soon

Detailed video explanations by scholars and experts will be available soon.