Mankutimmana Kagga by D.V. Gundappa
ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ । ಲಯವಡಿಸುವುದದೇನು ಶಿವಯೋಗಲೀಲೆ? ॥ ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- । ನ್ವಯಿಸಿಕೊಂಡಿಹುದೇನು? - ಮಂಕುತಿಮ್ಮ ॥ ೬೧೩ ॥
nayana yugadim jagava poredu, niTilAkShiyim । layavaDisuvudadEnu shivayOgalIle> ॥ jayisi madanana baLika tannoDaloL umeyanu । anvayisikondihudEnu? - Mankutimma ॥ 613 ॥
ಈ ಜಗತ್ತನ್ನು ತನ್ನ ಎರಡೂ ಕಣ್ಣುಗಳಿಂದ ಶಾಂತ ನೋಟದಿಂದ ನೋಡುತ್ತಾ, ಪೊರೆಯುತ್ತಾ, ಹಣೆಯ ಕಣ್ಣಿಂದ ಲಯ ಕಾರ್ಯದಲ್ಲಿ ನಿರತನಾಗಿರುವವನು ಶಿವ. ಎರಡೂ ಕೆಲಸಗಳನ್ನು ಸಮತೆಯಿಂದ ಸಮಭಾವದಿಂದ ಮಾಡುವುದೇ ಶಿವಯೋಗಲೀಲೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಒಂದು ಕಡೆ ಕಾಮನನ್ನು ತನ್ನ ಒಳಗಣ್ನಿಂದ ಸುಟ್ಟು ಅದೇ ರೀತಿ ಪಾರ್ವತಿಯನ್ನು ತನ್ನ ಅರ್ಧಾಂಗಿಯನ್ನಾಗಿಸಿಕೊಂಡು” ಅರ್ಧನಾರೀಶ್ವರ” ನೆಂದು ಕರೆಯಲ್ಪಟ್ಟಿದ್ದಾನೆ. ಒಂದರೊಳಗಿದ್ದುಕೊಂಡು ಅದನ್ನೇ ಜಯಿಸಿ ಬದುಕಿನಲ್ಲಿ ಸಮನ್ವಯವನ್ನು ಕಂಡುಕೊಳ್ಳುವ ವಿಧಾನವನ್ನು ದೃಷ್ಟಾಂತ ಸಹಿತ ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Shiva is the supreme practitioner of art of balance between attachment and detachment. He takes care of (overlooks) the world with this two eyes. But when it is time for destruction, he simply goes ahead to end the world with his third eye on the fore head. He destroyed Manmatha (God of Love). Yet, he loved Parvathi so much that he gave her half his body to become Ardhanareeshawara." - Mankutimma
Video Coming Soon
Detailed video explanations by scholars and experts will be available soon.