Mankutimmana Kagga by D.V. Gundappa
ಮಾರನಂ ದಂಡಿಸಿರೆ ಗೌರಿಯಿಂ ಭಯವೇನು? । ಚಾರುಸಹಕಾರಿಯವಳೆಂದು ಶಿವನೊಲಿದನ್ ॥ ಮೀರೆ ಮೋಹವನು ಸಂಸಾರದಿಂ ಭಯವೇನು? । ದಾರಿ ಕೆಳೆಯದು ನಿನಗೆ - ಮಂಕುತಿಮ್ಮ ॥ ೬೧೪ ॥
mAranam danDisire gauriyim bhayavEnu? । chAru sahakAriyavaLendu shivanolidan ॥ mIre mohavanu samsAradim bhayavEnu? । dAri keLeyadu ninage - Mankutimma ॥ 614 ॥
ಮನ್ಮಥನನ್ನುಸುಟ್ಟರೆ ಗೌರಿಯಿಂದ ಭಯವೇನು? ಮನೋಹರ ಮಾನಸಳು ಅವಳೆಂದು ಪಾರ್ವತಿಗೆ ಒಲಿದಿಹನು,ಶಂಕರ. ಹಾಗೆಯೇ ಸಂಸಾರದಲ್ಲಿರುವವರಿಗೆ ಮೋಹವನ್ನು ತೊರೆದ ಮೇಲೆ ಭಯವಿರುವುದಿಲ್ಲ. ಮೋಹರಹಿತವಾದ ಮಾರ್ಗವು ನಮಗೆ ಸನ್ನಿಹಿತವಾಗಿ ಸ್ನೇಹಿತನಂತೆ ಭವದ, ಅಂದರೆ ಸಂಸಾರದ ಹಾದಿಯನ್ನು ಸವೆಸಲು ಸಹಕಾರಿಯಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
When Shiva has conquered Manmatha (Cupid of Indian mythology), why should be afraid of Gowri's beauty? He accepted her because she was the appropriate partner for his life. If one can come over attachment, there is nothing to be afraid of in this world. The world will just be a good friend in your journey (towards enlightenment)." - Mankutimma
Video Coming Soon
Detailed video explanations by scholars and experts will be available soon.