Mankutimmana Kagga by D.V. Gundappa
ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು । ಅನವರತಪರಿಚರ್ಯೆಯವರೊರೆವ ಪಾಠ ॥ ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ । ಮನಕೆ ಪುಟಸಂಸ್ಕಾರ - ಮಂಕುತಿಮ್ಮ ॥ ೬೧೧ ॥
maneye maThavendu tiLi, bandhu baLagave guruvu । anavarata paricharyeyu avaroreva pATha ॥ ninaguLida jagava muTTipa sEtu samsAra । manake puTasamskAra - Mankutimma ॥ 611 ॥
ಜ್ಞಾನಕ್ಕಾಗಿ ಅಲೆಯದೆ, ಮನೆಯನ್ನೇ ಮಠವೆಂದು ತಿಳಿ. ನಿನ್ನ ಮನೆಗೆ ಬಂದುಹೋಗುವ ಬಂಧು ಮಿತ್ರರೇ ನಿನ್ನ ಗುರುಗಳು. ನಿರಂತರವಾಗಿ ಅವರೊಂದಿಗಿನ ನಿನ್ನ ಪರಿಚಯ ಮತ್ತು ಅವರಿಗೆ ನೀನು ಮಾಡುವ ಸೇವೆಯೇ ನೀನು ಕಲಿಯುವ ಪಾಠ. ನಿನಗೆ ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಲ್ಪಿಸುವ ಸೇತುವೆಯೇ ಈ ಸಂಸಾರ. ಈ ಸಂಸಾರದಲ್ಲಿ ಕಲಿತ ಪಾಠಗಳೇ ಮನಕ್ಕೆ ಪಟುತ್ವವನ್ನು ನೀಡಿ ನಿನ್ನನ್ನು ಸಂಸ್ಕಾರವಂತನನ್ನಾಗಿಸುತ್ತದೆ ಎಂದು ಬದುಕಿನಲ್ಲಿ ಬದುಕುವುದರಿಂದಲೇ ಕಲಿಯುವ ಪಾಠವನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
You should consider your own home as hermitage. Your own friends and relatives are your teachers. You should serve them well - this is the only lesson that is taught (by culture). This world as we see it is the only bridge that you have to the rest of the universe (after life, heaven, hell, whatever). Living in this world and abiding dharma is a cleansing exercise to the mind." - Mankutimma
Video Coming Soon
Detailed video explanations by scholars and experts will be available soon.