Back to List

Kagga 610 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ । ಉತ್ತಮವದೆನಿಪುವುವು ಕಿಟ್ಟಗಳ ಕಳೆದು ॥ ಚಿತ್ತ ಸಂಸ್ಕಾರಸಾಧನವಯ್ಯ ಸಂಸಾರ । ತತ್ತ್ವ ಪ್ರವೃತ್ತಂಗೆ - ಮಂಕುತಿಮ್ಮ ॥ ೬೧೦ ॥

kShuttu mamategaLu jIvake kulime suttigegaL । uttamavu adenipuvuvu kiTTagaLa kaLedu ॥ chitta samskAra sAdhanavayya samsAra । tattva pravRuttange - Mankutimma ॥ 610 ॥

Meaning in Kannada

ಕಮ್ಮಾರನ ಕುಲಿಮೆಯಲ್ಲಿ ಲೋಹವನ್ನು ಕಾಯಿಸಿದಾಗ ಕಲ್ಮಶಗಳು ಕಳೆದ ಮತ್ತು ಶುದ್ಧವಾದ ಲೋಹವನ್ನು ಸುತ್ತಿಗೆಗಳಿಂದ ಬಡಿದಾಗ ಅದು ಬಯಸಿದ ಆಕಾರವನ್ನು ಪಡೆಯುವಂತೆ, ಬದುಕಿನಲ್ಲೂ, ದೇಹದ ಹಸಿವಿನ ಅವಶ್ಯಕತೆಯಾದ ಆಹಾರವನ್ನು ಪಡೆಯುವ ಪ್ರಯತ್ನ ಮತ್ತು ಭೌದ್ಧಿಕ ಹಸಿವನ್ನು ಪೂರೈಸುವ ಮಮತೆ ಮುಂತಾದವುಗಳ ಸುಳಿಯಲ್ಲಿ ಬಿದ್ದು, ಹಾದು, ಅನುಭವವನ್ನು ಪಡೆದು, ಪರತತ್ವವನ್ನು ಮನೋಗತಮಾಡಿಕೊಳ್ಳಲು ಈ ಸಂಸಾರದ ಕಶ್ಮಲಗಳನ್ನು ತೊಳೆದುಕೊಳ್ಳಲು ಮಾರ್ಗವೇ ಈ ಸಂಸಾರ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Hunger and affection trouble a man a lot and drive him to introspect. Those are furnace and hammer in a the foundry. They repeated heat and beat the metal to cleanse it of all impurities. The world is also like that. A person who can introspect and philosophize will use it to refine his thoughts (and get closer to God / truth)." - Mankutimma

Themes

DevotionWisdomLifeSufferingLove

Video Section

Video Coming Soon

Detailed video explanations by scholars and experts will be available soon.