Mankutimmana Kagga by D.V. Gundappa
ಕೈಕಯಿಯವೊಲು ಮಾತೆ, ಸತ್ಯಭಾಮೆವೊಲು ಸತಿ । ಸಾಕಿ ಸಂತಸವೆರೆಯೆ ಸಂಸಾರ ಲೀಲೆ ॥ ಬೇಕು ಮತ್ಸರ ಮಮತೆ ಮೋಹಂಗಳಾವೇಶ । ಲೋಕನಾಟಕಕಾಗ - ಮಂಕುತಿಮ್ಮ ॥ ೬೦೮ ॥
kaikayiyavolu mAte, satyabhAmevolu sati । sAki santasavereye samsAra lIle ॥ bEku matsara mamate mOhangaLa Avesha । lOka nATakake Aga - Mankutimma ॥ 608 ॥
ಕೈಕೇಯಿಯಂತಹ ತಾಯಿ ಇರಬೇಕು ಮತ್ತು ಸತ್ಯಭಾಮೆಯಂತಹ ಹೆಂಡತಿ ಇರಬೇಕು. ಅವರಂತೆ ಪ್ರೀತಿ ತೋರಿದರೆ ಮಾತ್ರ ನಡೆಯುವುದು ಸಂಸಾರದ ಲೀಲಾವಿನೋದ. ಈ ಜಗನ್ನಾಟಕದ ಲೀಲೆಗೆ ಮೋಹ, ಮಮತೆ, ಮತ್ಸರ ಮುಂತಾದವುಗಳು ಬೇಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Mothers should be like Kaikeyi (mother of Bharatha in Ramayana). Wife should be like Satyabhama (wife of Krishna). They both showed the world how powerful their love can be. Their actions although born out of love, had adverse consequences. Life is wonderful only when such unlimited love and affection exist. Such jealousy, affection and attachment are required for the drama of life." - Mankutimma
Video Coming Soon
Detailed video explanations by scholars and experts will be available soon.