Back to List

Kagga 607 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು । ವ್ಯಾಮೋಹಕೆಡೆಗೊಟ್ಟೊಡದು ನಿಗಳವಹುದು ॥ ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ? । ಆಮಿಷದ ತಂಟೆಯಿದು - ಮಂಕುತಿಮ್ಮ ॥ ೬೦೭ ॥

premAtishayavu irada dAmpatya vardhisadu । vyAmOhake eDegoTToDe adu nigaLavahudu ॥ sAmarasyavanu entu kANbudI viShamadali? । AmiShada tanTeyidu - Mankutimma ॥ 607 ॥

Meaning in Kannada

ದಾಂಪತ್ಯದಲ್ಲಿ ಸಾಮರಸ್ಯವಿರಬೇಕು. ಇಲ್ಲದಿದ್ದರೆ ಅದು ವೃದ್ಧಿಯಾಗುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಪರಸ್ಪರ ಅತಿಶಯದ ಪ್ರೇಮವಿರಬೇಕು. ಪ್ರೇಮದ ಸ್ಥಾನದಲ್ಲಿ ವ್ಯಾಮೋಹವಿದ್ದರೆ ಅದು ನಮಗೆ ಬಂಧನದ ಸಂಕೋಲೆಗಳಾಗಿ ಬದುಕು ಕ್ಲಿಷ್ಟವಾಗಿ ಪರಿಣಮಿಸುತ್ತದೆ. ಅಂತಹ ಸ್ಥಿತಿಯಲ್ಲಿ ಸಾಮರಸ್ಯವನ್ನು ಕಾಣಲು ಸಾಧ್ಯವಿಲ್ಲ. ಈ ರೀತಿ ನಮಗೆ ಮೋಹ ಅಥವಾ ವ್ಯಾಮೋಹ ಉಂಟಾಗುವುದಕ್ಕೆ ನಮ್ಮ ಮನದಲ್ಲುಂಟಾಗುವ ಆಸೆಗಳೇ ಕಾರಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

A marriage without excess love and affection will not prosper. But if you let love grow into too much attachment, then it ties you down like a chain. How can one reconcile these two opposites? Thus are the tricks of attraction." - Mankutimma

Themes

Love

Video Section

Video Coming Soon

Detailed video explanations by scholars and experts will be available soon.