Mankutimmana Kagga by D.V. Gundappa
ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ । ಸಂಸ್ಕೃತಿ ದ್ವಂದ್ವಗಳ ಸಮತೂಗಲರಿವಂ ॥ ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ । ಸಾಸವೀ ಗೃಹಧರ್ಮ - ಮಂಕುತಿಮ್ಮ ॥ ೬೦೬ ॥
trAsinali kappegaLa sarikUDisuva chaturi । samskRuti svandvagaLa samatUgalarivam ॥ bIsukattigaLa madhyadi nUlamEl naDeva । sAsavI gRuhadharma - Mankutimma ॥ 606 ॥
ಒಬ್ಬ ಗೃಹಸ್ಥ ತನ್ನ ದಾಯತ್ವವನ್ನು ನಿರ್ವಹಿಸಲು ಪಡುವ ಪರದಾಟದ ಚಿತ್ರಣವನ್ನು ನೀಡುತ್ತಾ, ತಕ್ಕಡಿಯಲ್ಲಿ ಕಪ್ಪೆಗಳನ್ನು ಸಮರ್ಪಕವಾಗಿ ತೂಗಬಹುದಾದ, ಎರಡು ಸಂಸ್ಕೃತಿಗಳ ಅಥವಾ ಒಂದೇ ಸಂಸ್ಕೃತಿಯಲ್ಲಿರುವ ದ್ವಂದ್ವಗಳ ನಡುವೆ ಸಮತೋಲನವನ್ನು ಕಾಯಬಲ್ಲ, ಮತ್ತು ಅಕ್ಕಪಕ್ಕದಲ್ಲಿ ಬೀಸುಕತ್ತಿಗಳು ತೂಗುತ್ತಿರುವಾಗ, ಅವುಗಳನ್ನು ತಪ್ಪಿಸಿಕೊಂಡು ಹಗ್ಗದ ಮೇಲೆ ನಡೆಯುವ ಚತುರತೆಯೆಂತೆಯೇ ಗೃಹಧರ್ಮವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಸಾಹಸಕ್ಕೂ ಬೇಕಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Dealing with the dilemmas of culture is as difficult a task as keeping frogs still on a balance. It is like walking on a tight rope when people are wielding swords to kill you when you fall down. Running a household is such a delicate balancing act." - Mankutimma
Video Coming Soon
Detailed video explanations by scholars and experts will be available soon.