Mankutimmana Kagga by D.V. Gundappa
ಉದರಶಿಖಿಯೊಂದುಕಡೆ, ಹೃದಯಶಿಖಿಯೊಂದುಕಡೆ । ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ॥ ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ । ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ॥ ೬೦೫ ॥
udarashikhiyondu kaDe, hRudayashikhiyondu kaDe । kudisadire jIvashile mRuduvappudentu? ॥ badukinuriyali karagi tiLiyAgadiha jIva । pudiyadu AtmArNavadi - Mankutimma ॥ 605 ॥
ಹೊಟ್ಟೆಯ ಶಾಖ ಒಂದು ಕಡೆ, ಹೃದಯದ ಶಾಖವೊಂದುಕಡೆ. "ಇವೆರಡು ಶಾಖಗಳ ನಡುವೆ ಕಲ್ಲಾದ ಆತ್ಮ ಮೃದುವಾಗುವುದೆಂತು? ಜೀವನದ ಬೇಗೆಯಲ್ಲಿ ಬೆಂದು ಕರಗದ ಆತ್ಮ ಜಗದಾತ್ಮಸಾಗರವ ಸೇರುವುದೆಂತು? " ಎಂದು ಹೇಳುತ್ತಾ, ಆತ್ಮ ತನ್ನ ಬೇಧಗಳನ್ನು ಕಳೆದುಕೊಂಡು ವೈಶಾಲ್ಯವನ್ನು ಪಡೆಯಬೇಕಾದರೆ ಕರಗಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Every being is baked by the heat in his stomach (hunger) and the heat in his heart (love). If the life is not so heated, how will it melt? Only if murky life is heated thus will it get clear. Only then can it fill the sea of the soul." - Mankutimma
Video Coming Soon
Detailed video explanations by scholars and experts will be available soon.