Back to List

Kagga 604 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೊಸಹೊಸಬನಾಗುವನನುಕ್ಷಣಂ ಮಾನವನು । ವಸುಧೆಯಾ ಮೂಸೆಯಲಿ ಪುಟಪಾಕವಾಂತು ॥ ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ । ಕಸವೆಲ್ಲ ಕಳೆದವನು - ಮಂಕುತಿಮ್ಮ ॥ ೬೦೪ ॥

hosa hosabanAguvanu anukShaNam mAnavanu । vasudheya aa mUseyali puTapAkavAntu ॥ rasamUrtiyAguvanu jagadAtmamati beLeye । kasavella kaLedavanu - Mankutimma ॥ 604 ॥

Meaning in Kannada

ಮಾನವನು ಈ ಜಗತ್ತಿನ ಬದುಕಿನ ಮೂಸೆಯಲ್ಲಿ ಮತ್ತೆ ಮತ್ತೆ ಕಾಯಿಸಲ್ಪಟ್ಟು, ಶುದ್ಧೀಕರಿಸಲ್ಪಟ್ಟು ‘ಅಪರಂಜಿ’ ಯಂತೆ, ಕಸವನ್ನೆಲ್ಲ ಕಳೆದುಕೊಂಡು, ಸತ್ವವನ್ನು ತುಂಬಿಕೊಂಡು, ಹೊಸತನವನ್ನು ಮೆರೆಯುತ್ತಾ ಶುದ್ಧನಾಗುತ್ತಾನೆ. ಅವನು ರಸಮೂರ್ತಿಯಾಗಿ ಸತ್ವವನ್ನು ಬೆಳಗುತ್ತಾ, ಸಂಕುಚಿತತೆ ಕಳೆದು, ಜಗತ್ತಿನಲ್ಲಿ ಏಕಾತ್ಮ ಭಾವದಿಂದ ಬೆಳಗುತ್ತಾನೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Every man feels himself as a-new-man every second when is being cooked for purification in the furnace of the world. When one sheds all the impurities the universal realization dawns on him and he becomes one with the universe (and the creator)." - Mankutimma

Themes

LifeNatureSelf

Video Section

Video Coming Soon

Detailed video explanations by scholars and experts will be available soon.