Mankutimmana Kagga by D.V. Gundappa
ಧರಣಿಗೋಳವು ಮೂಸೆ; ಜೀವಗಳನದರೊಳಗೆ । ಪರಿಶುದ್ಧಿಗೊಳಿಸುವುದು ಸಂಸಾರತಾಪ ॥ ಪರಿಪರಿಯ ಬಂಧುಧರ್ಮದಿನ್ ಅಹಂಮತಿ ಕರಗೆ । ಹರಡಿ ಹಬ್ಬುವುದಾತ್ಮ - ಮಂಕುತಿಮ್ಮ ॥ ೬೦೩ ॥
dharaNigOLavu mUse; jIvagaLanu adaroLage । parishuddhi goLisuvudu samsAra tApa ॥ paripariya bandhu dharmadin aham mati karage । haraDi habbuvudu Atma - Mankutimma ॥ 603 ॥
ಇಡೀ ಜಗತ್ತೇ ಒಂದು ಲೋಹಗಳನ್ನು ಕಾಯಿಸಿ, ಕರಗಿಸಿ, ಶುದ್ಧೀಕರಿಸುವ ಪಾತ್ರೆ. ನಾವೆಲ್ಲಾ ಬದುಕನ್ನು ಪಡೆದು ಅದರೊಳಕ್ಕೆ ಬಿದ್ದಿದ್ದೇವೆ. ಪರಿಪರಿಯಾದ ಬಂಧಗಳ ಧರ್ಮಗಳನ್ನು ಪಾಲಿಸುತ್ತಾ ನಾವಿರುವಾಗ, ಸಂಸಾರದ ತಾಪ, ನಮ್ಮನ್ನು ಅದರೊಳಗೆ ಕಾಯಿಸಿ, ಕಲ್ಮಷಗಳನ್ನು ಸುಟ್ಟು ಪರಿಶುದ್ಧಗೊಳಿಸುತ್ತದೆ. ಹಾಗೆ ಪರಿಶುದ್ಧಗೊಂಡ ನಮ್ಮಲ್ಲಿ ಅಹಂಕಾರವು ನಶಿಸಿದರೆ, ಭೇದಗಳು ಅಳಿಸಿ ಜಗದಾತ್ಮತೆಯ ಭಾವ ಅರಳಿದರೆ ನಾವು ವಿಶ್ವಮಾನವರಾಗುತ್ತೇವೆ ಎನ್ನುವ ಭಾವವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
This earth is a vessel. Lives of all of us gets cooked inside that using heat of this world (just by being in the world). By relating ourselves to others in this world, our pride and selfishness will wear and the true nature (true, beautiful and content) of the soul will expand." - Mankutimma
Video Coming Soon
Detailed video explanations by scholars and experts will be available soon.