Mankutimmana Kagga by D.V. Gundappa
ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ । ಆಯಸಂಗೊಳುತ ಸಂಸಾರಿಯಾಗಿರುವ ॥ ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ । ಹೇಯವದರೊಳಗೇನೊ - ಮಂಕುತಿಮ್ಮ ॥ ೬೦೨ ॥
mAyeyembaLa sRujisi, tAyanAgisi jagake । AyAsangoLuta samsAriyAgiruva aa ॥ nAyaka brahman anuyAyigaLu nAvella । heyavadaroLage Eno - Mankutimma ॥ 602 ॥
” ಸುಮ್ಮನೊಬ್ಬಂಟಿ ಯೆಂತಿಹುದು” ” ಹೊಮ್ಮುವೆನು ಕೋಟಿರೂಪದಲಿ ನಾನು” ಎಂದು ಆ ಪರಮಬ್ರಹ್ಮ ಎಣಿಸಿದನಂತೆ ‘ಆ ಏಳಸಿಕೆಯೇ ಮಾಯೆ " ಎಂದು ಗುಂಡಪ್ಪನವರು ಮುಕ್ತಕ ೭೪ ರಲ್ಲಿ ಬರೆಯುತ್ತಾರೆ. ಅದನ್ನೇ ಮುಂದುವರೆಸುತ್ತಾ ಈ ಮಾಯೆಯನ್ನು ಸೃಷ್ಟಿಸಿ ಅದನ್ನು ಆ ಜಗತ್ತಿಗೆ ತಾಯಿಯಾಗಿಸಿ, ತಂದೆಯ ರೂಪದಲಿ ಆ ಪರಮಾತ್ಮ, ಜಗತ್ಸಂಸಾರಿಯಾಗಿದ್ದಾನೆ. ನಾವೆಲ್ಲಾ ಅವನ ಈ ಮಾಯಾ ಸಂಸಾರದ ವಾಸಿಗಳು ಮತ್ತು ಅವನ ಅನುಯಾಯಿಗಳು. ಹಾಗಿರುವಾಗ ಈ ಜಗತ್ತಿನಲ್ಲಿ ಇದ್ದೂ ಈ ಜಗತ್ತನ್ನು ಅಸಹ್ಯಪಟ್ಟುಕೊಳ್ಳುವುದು ಸರಿಯೇನೋ? ಎಂದು ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
He created the illusion (Maya) so that he could amuse himself. He made her (Maya) the mother of this world. He seems to be busy running this world. Such is the nature of the creator. He is the leader and we all follow him. What is the difficulty in accepting this fact?" - Mankutimma
Video Coming Soon
Detailed video explanations by scholars and experts will be available soon.