Back to List

Kagga 601 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು । ದೊರತುದ ಹಸಾದವೆಂದುಣ್ಣು ಗೊಣಗಿಡದೆ ॥ ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ । ಹೊರಡು ಕರೆ ಬರಲ್ ಅಳದೆ - ಮಂಕುತಿಮ್ಮ ॥ ೬೦೧ ॥

iruva kelasava mADu kiridenade manaviTTu । doratuda hasAdavenduNNu goNagiDade ॥ dharisu lOkada bharava paramArthavanu biDade । horaDu kare baral aLade - Mankutimma ॥ 601 ॥

Meaning in Kannada

ಬದುಕಿನಲ್ಲಿ ನಿನಗೆ ಸಿಕ್ಕ ಕೆಲಸವನ್ನು " ಇದು ಸಣ್ಣದು- ಇದು ಸರಿಯಲ್ಲ " ಎನ್ನದೆ ಮನವಿಟ್ಟು ಮಾಡು ಮತ್ತು ಆ ಕೆಲಸದಿಂದ ನಿನಗೆ ದೊರೆತ ಫಲವನ್ನು ಗೊಣಗಾಡದೆ, ಆ ಪರಮಾತ್ಮನ ಪ್ರಸಾದವೆಂದು ಬಗೆದು ಸ್ವೀಕರಿಸು. ನಿನ್ನ ಮೇಲೆ ಹೊರಿಸಿದ ಲೋಕದ ಭಾರದ ಭಾಗವನ್ನು ಭರಿಸುವಾಗ ಪಾರಮಾರ್ಥಿಕ ಭಾವವನ್ನು ಬಿಡದೆ ಬದುಕಿ, ಅಂತಕನ ಕರೆ ಬಂದಾಗ ಅತ್ತು, ಬೇಸರಿಸದೆ ಹೊರಡು, ಎಂದು ಬದುಕನ್ನು ಹೇಗೆ ಬಾಳಬೇಕು ಎನ್ನುವ ಉಪದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Do your work with all your heart without feeling sorry for yourself. Do not crib and enjoy what ever your get. Endure the misery of this world without losing sight of the universal truth. When it is your turn to go, just leave without crying." - Mankutimma

Themes

WisdomLifeDeathMoralityDetachmentSelfLoveDuty

Video Section

Video Coming Soon

Detailed video explanations by scholars and experts will be available soon.