Mankutimmana Kagga by D.V. Gundappa
ಬದುಕು ಕದನವೆಂದಂಜಿ ಬಿಟ್ಟೋಡುವನು । ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ॥ ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- । ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ॥ ೫೯೮ ॥
baduku kadanavendanji biTToDuvanu । bidiya bAyige kavaLa aagade uLiyuvane? ॥ edeyanu ukkAgisuta, matigdeya piDidu, । nIneduru nile bidiyu oliva - Mankutimma ॥ 598 ॥
ಜೀವನವನ್ನು ಒಂದು ಕದನವೆಂದು, ಅದಕ್ಕೆ ಹೆದರಿ ಬಿಟ್ಟು ಓಡಿಹೋಗುವವನು ವಿಧಿಯ ವಿನ್ಯಾಸದಿಂದ ಹೊರಗುಳಿಯಲು ಸಾಧ್ಯವೇ? ಹಾಗೆ ಹೆದರಿ ಹೋದರೆ ವಿಧಿಯು ವಿಧಿಸಿದ ಕರ್ಮವ ಸವೆಸದೆ ಈ ಬದುಕಿನಿಂದ ಹೋಗಲು ಸಾಧ್ಯವೇ? ಹಾಗಾಗಿ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಂಡು, ವಿವೇಕವನ್ನೇ ಆಯುಧವನ್ನಾಗಿಸಿಕೊಂಡು, ಬಂದದ್ದನ್ನೆಲ್ಲಾ ಎದುರಿಸುತ್ತೇನೆ ಮತ್ತು ಸಹಿಸುತ್ತೇನೆ ಎಂದು ಗಟ್ಟಿಯಾಗಿ ನಿಂತರೆ, ಭವ ಸಾಗರವನ್ನು ಈಜಲು ನಮ್ಮ ಪ್ರಯತ್ನಕ್ಕೆ ಆ ವಿಧಿಯೂ ಸಹ ಸಹಾಯಮಾಡುತ್ತದೆ, ಎಂದು ನಮಗೆ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If one thinks that life is a tough battle and tries to run away; will he not become snacks for the providence? Make your heart as strong as iron. Hold the club of intellect and face fate head on - it will relent and support you. - Mankutimma
Video Coming Soon
Detailed video explanations by scholars and experts will be available soon.