Back to List

Kagga 599 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು । ಚರಿಕೆ ತಾರಾಗ್ರಹಗಳಿಷ್ಟವೋದಂತೆ ॥ ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ । ಸ್ಥಿರಚಿತ್ತ ನಿನಗಿರಲಿ - ಮಂಕುತಿಮ್ಮ ॥ ೫೯೯ ॥

tirugisali vidhirAyanu iccheyim yantravanu । charike tArAgrahagaLa iShTavOdante ॥ parihAsadim karma daiva kEkegaLiDali । sthirachitta ninagirali - Mankutimma ॥ 599 ॥

Meaning in Kannada

ನಿನ್ನ ನಿಯಂತ್ರಿಸುವ ಆ ವಿಧಿರಾಯನು, ತನ್ನ ಇಚ್ಚೆಯಂತೆ ನಿನ್ನ ಬದುಕಿನ ಚಕ್ರವನ್ನು ಹೇಗಾದರೂ ತಿರುಗಿಸಲಿ ಮತ್ತು ನಿನ್ನ ಜಾತಕದ ರೀತ್ಯಾ ನಕ್ಷತ್ರ ಗ್ರಹಗಳು ನಿನ್ನ ಬದುಕಿನ ಗತಿಯನ್ನು ಬದಲಾಯಿಸುತ್ತಾ ಇರಲಿ, ನಿನ್ನ ಕರ್ಮಕ್ಕೆ ನಿಯಂತ್ರಕರಾದ ದೇವತೆಗಳು ಅಟ್ಟಹಾಸದಿಂದ ಅಥವಾ ಪರಿಹಾಸದಿಂದ "ನೋಡಿದೆಯಾ ಇವನನ್ನು ಹೇಗೆ ಆಡಿಸುತ್ತಿದ್ದೇವೆ" ಎಂದು ಕುಹಕದ ನಗೆ ನಗಲಿ. ಏನೇ ಆದರೂ ನಿನ್ನ ಮನಸ್ಸು ದೃಢವಾಗಿರಲಿ ವಿಚಲಿತವಾಗದೆ ಇರಲಿ ಎಂದು ಒಂದು ಉಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Let the providence run the world machinery as it pleases. Let the planets and stars wander the way they want. Let fate keep laughing at you (your failures). You continue to march on to your goal with a steady mind. - Mankutimma

Themes

LifeFate

Video Section

Video Coming Soon

Detailed video explanations by scholars and experts will be available soon.