Back to List

Kagga 597 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ । ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ॥ ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ । ಗೊತಿಲ್ಲ ಫಲದ ಬಗೆ - ಮಂಕುತಿಮ್ಮ ॥ ೫೯೭ ॥

bitta maLegaLavOlu yatna daivika namage । yuktadoLage eraDum anuvAge beLe hulusu ॥ yatna biTTare lOpa, daiva tAm biDe tApa । gottilla phalada bage - Mankutimma ॥ 597 ॥

Meaning in Kannada

ಸಕಾಲಕ್ಕೆ ಬಿತ್ತುವ ಬೀಜ ಮತ್ತು ಬರುವ ಮಳೆಯಿಂದಾಗಿ ಬೆಳೆ ಬರಬೇಕು. ಸಕಾಲಕ್ಕೆ ಸರಿಯಾದ ಬೀಜವನ್ನು ಬಿತ್ತುವುದು ನಮ್ಮ ಯತ್ನ, ಸಕಾಲಕ್ಕೆ ಸರಿಯಾದ ಹದದಲ್ಲಿ ಬರುವ ಮಳೆ ದೈವ ಕೃಪೆಯಿಂದಾಗಬೇಕು. ನಾಮ್ಮ ಪ್ರಯತ್ನ ಮತ್ತು ದೈವ ಕೃಪೆಗಳು ಸೇರಿದರೆ ಬೆಲೆ ಹುಲುಸಾಗಿ ಬೆಳೆಯುತ್ತದೆ. ನಮ್ಮ ಪ್ರಯತ್ನವನ್ನು ಮಾಡದಿದ್ದರೆ ಅದು ನಮ್ಮ ಕರ್ತವ್ಯ ಲೋಪ. ದೈವ ಕೃಪೆಯಾಗದಿದ್ದರೆ ದೈವ ಮುನಿಸಿಕೊಂಡಿದೆ ಎಂದೇ ತಿಳಿಯಬೇಕು. ಹಾಗಾಗಿ ನಮಗೆ ನಮ್ಮ ಕೆಲಸಕಾರ್ಯಗಳಿಗೆ ಸೂಕ್ತ ಫಲ ಸಿಗುವುದೋ ಇಲ್ಲವೋ ಎಂಬ ಅರಿವಿಲ್ಲ ಎಂದು ಉಲ್ಲೇಖಮಾದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The quality of the crop depends on our efforts (seeds, work and other efforts) as well as providence. When both things work out, then the crop will be excellent. If efforts lack, it is our fault. If rains don't work out then it creates anxiety - but nothing much can be done about it. We will never know about the crop until it comes. - Mankutimma

Themes

DeathDuty

Video Section

Video Coming Soon

Detailed video explanations by scholars and experts will be available soon.