Mankutimmana Kagga by D.V. Gundappa
ಗರಡಿಯ ಸಾಮಿಂದೆ ನೀನೆದುರಾಳ ಗೆಲ್ಲದೊಡೇಂ? । ಬರದಿಹುದೆ ನಿನಗನಿತು ಕಾಯಾಂಗಪಟುತೆ? ॥ ವರ ಸದ್ಯಕಿಲ್ಲದೊಡೆ ಬರಿದಾಗುವುದೆ ಪೂಜೆ? । ಪರಿಶುದ್ಧ ಮನವೆ ವರ - ಮಂಕುತಿಮ್ಮ ॥ ೫೯೬ ॥
garaDiya sAminde nInu edurALa gelladoDEm? । baradihude ninage initu kAyaanga paTute? ॥ vara sadyakilladoDe baridAguvude pUje? । parishuddha manave vara - Mankutimma ॥ 596 ॥
ನೀನು ಗರಡಿಯ ಸಾಮನ್ನು ಮಾಡಿ, ಕುಸ್ತಿಯಲ್ಲಿ ಎದುರಾಳಿಯಮೇಲೆ ಗೆಲ್ಲದಿದ್ದರೆ ಏನಂತೆ, ನಿನ್ನ ದೇಹವಂತೂ ಗಟ್ಟಿಯಾಗುವುದಲ್ಲವೆ? ಪೂಜೆ ಮಾಡಿದ ಕೂಡಲೇ ವರ ಸಿಗದಿದ್ದರೆ, ಪೂಜೆಯನ್ನು ವ್ಯರ್ಥವೆನ್ನುತ್ತೀಯೇನು? ಗರಡಿ ಸಾಮಿಂದ ದೇಹ ಗಟ್ಟಿಯಾಗುವುದು ಹೇಗೆ ಸಂದ ಫಲವೋ ಹಾಗೆ ಮನಸ್ಸು ಶುದ್ಧವಾಗುವುದೇ ಪೂಜೆಯಿಂದ ಸಲ್ಲುವ ಉತ್ತಮ ಫಲವೆಂದು, ಜಗತ್ತಿನ ಬದುಕಿನಲ್ಲಿ ನಮ್ಮೆಲ್ಲರ ಹೋರಾಟದ ಫಲಶೃತಿಯ ರೂಪವನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You are a wrestlers practicing in a gym. So what if you do not defeat the opponent today? Will you not get better physique because of the fight? So what if your prayers at the temple are not answered immediately? Having a pure mind is itself a boon. - Mankutimma
Video Coming Soon
Detailed video explanations by scholars and experts will be available soon.