Mankutimmana Kagga by D.V. Gundappa
ಎನಿತು ನೀಂಗೆಲಿದೆಯೆಂದೆನರು ಬಲ್ಲವರೆಂದು- । ಮೆನಿತು ನೀಂ ಪೋರ್ದೆ ಯೆನಿತನು ಪೊತ್ತೆಯೆನುವರ್ ॥ ಗಣನೆ ಸಲುವುದು ತೋರ್ದ ಪೌರುಷಕೆ, ಜಯಕೆಲ್ಲ । ದಿನದಿನದ ಗರಡಿಯಿದು - ಮಂಕುತಿಮ್ಮ ॥ ೫೯೫ ॥
enitu nIm gelideyendu anaru ballavaru endum । enitu nIm pOrde yenitanu potte enuvar ॥ gaNane saluvudu tOrda pauruShake, jayakalla । dinadinada garaDiyidu - Mankutimma ॥ 595 ॥
ಅರಿತವರು, ನೀ ಏನನ್ನು ಅಥವಾ ಎಷ್ಟು ಗೆದ್ದೆಯೆಂದು ಕೇಳುವುದಿಲ್ಲ, ನೀ ಎಷ್ಟುಹೋರಾಡಿದೆ ಎಂದೋ ಅಥವಾ ನೀ ಎಷ್ಟು ಭಾರವನ್ನು ಹೊತ್ತೆ ಎಂಬುದನ್ನು ನೋಡುತ್ತಾರೆ. ಏಕೆಂದರೆ ಬದುಕಿನ ಹೋರಾಟದಲ್ಲಿ ನಾವೆಷ್ಟು ಧೈರ್ಯದಿಂದ, ತಾಳ್ಮೆಯಿಂದ ಹೋರಾಡಿದ್ದೇವೆ ಎನ್ನುವುದೇ ಗಣನೆಗೆ ಬರುವುದು. ನಾವು ಪಡೆದ ಜಯಕ್ಕೆ ಅಲ್ಲ. ಈ ಜಗತ್ತಿನ ಹೋರಾಟ ಒಂದು ಪ್ರತಿ ನಿತ್ಯದ ಗರಡಿಮನೆಯಂತೆ. ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು, ಪ್ರತಿ ನಿತ್ಯವೂ ಕುಸ್ತಿ ಮಾಡಬೇಕು. ಇಲ್ಲಿ ಎಷ್ಟು ಕಸರತ್ತು ಮಾಡಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ ಹೊರತು ಗೆಲುವಲ್ಲ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
Those who are wise will never ask you how many battles you won in life. They will ask how many you fought, how hard you tried, how much burden did you carry. For them, the valiant effort matters and not the victories. This world is a everyday gym. - Mankutimma
Video Coming Soon
Detailed video explanations by scholars and experts will be available soon.