Mankutimmana Kagga by D.V. Gundappa
ಬಿಡುವಿಲ್ಲದೀ ಜೀವಿತಾಪಣದ ಸರಕೆಣಿಸೆ । ಕಡೆಯೆಂದು? ಮುಗಿಯದಿಹ ಲಾಭನಷ್ಟಗಳ ॥ ಕಡತದೊಳ್ ಅದೆಂದಿನಾ ಲೆಕ್ಕವೇ ತೀರ್ಮಾನ? । ಬಿಡು ಲಾಭದಾತುರವ - ಮಂಕುತಿಮ್ಮ ॥ ೫೯೪ ॥
biDuvillada ee jIvita ApaNada sarakeNise । kaDeyendu? mugiyadiha lAbhanaShTagaLa ॥ kaDatadoL adendinA lekkavE tIrmAna। biDu lAbhadAturava - Mankutimma ॥ 594 ॥
ಬಿಡುವಿಲ್ಲದೆ ನಡೆಯುವ ಈ ಜಗತ್ತಿನ ಮಾರುಕಟ್ಟೆಯಲ್ಲಿ, ನಮಗೆ ನಮ್ಮ ಸರಕನ್ನ ಎಣಿಸಿ ಕಡೆಗೆ ಇಳಿಸಿ "ಇಂದಿನ ವ್ಯಾಪಾರ ಮುಗಿಯಿತು" ಎಂದು ಅಂದಿನಲಾಭ ನಷ್ಟಗಳ ಲಾಭ ನಷ್ಟಗಳ ಲೆಕ್ಕಾ ಹಾಕಲಾಗುವುದೆ? ಸಾಧ್ಯವಿಲ್ಲ, ಹಾಗಾಗಿ ನೀನು ನಿನ್ನ ಜೀವನವೆಂಬ ವ್ಯಾಪಾರದಲ್ಲಿ ಲಾಭದ ಆಸೆಯನ್ನು ಬಿಡು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Life is like a shop that runs non-stop. Our job is to keep the account books. Since it is a never ending story, how can we know if we are making profit or loss. We can only know short-term results at the end of each day - but in the long run they may be exactly reverse. So, stop running behind short-term profits. - Mankutimma
Video Coming Soon
Detailed video explanations by scholars and experts will be available soon.