Back to List

Kagga 593 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ । ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ॥ ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು । ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ॥ ೫೯೩ ॥

sattenendu enabEDa; sOtenendu enabEDa । battitennoLu sattvada ooteyenabEDa ॥ mRutyuvennuvodondu tereyiLita; tereyEru । matte tOrpudu nALe - Mankutimma ॥ 593 ॥

Meaning in Kannada

"ನಾನು ಸೋತೆ, ನನ್ನಲ್ಲಿ ಇನ್ನು ಶಕ್ತಿಯಿಲ್ಲ, ನನ್ನಲ್ಲಿ ಶಕ್ತಿಯ ಒರತೆ ಬತ್ತಿ ಹೋಗಿದೆ, ಹಾಗಾಗಿ ನಾನು ಸತ್ತೆನೆಂದೇ ತಿಳಿಯುತ್ತೇನೆ" ಎಂದು ಬದುಕಿನ ಹೋರಾಟದಲ್ಲಿ ಹತಾಶೆಯನ್ನು ತಾಳಬೇಡ. ಸಾವು ಎನ್ನುವುದು ಕಡಲ ಮೇಲಿನ ಅಲೆಯಂತೆ, ಒಮ್ಮೆ ಮೇಲೆದ್ದರೆ ಒಮ್ಮೆ ಇಳಿಯುತ್ತದೆ ಮತ್ತು ಮತ್ತೆ ಮೇಲೇಳುತ್ತದೆ. ಹಾಗಾಗಿ ನಿರಾಶೆ ಹತಾಶೆಗಳಿಗೆ ಬಲಿಯಾಗಬೇಡ ಎಂಬ ಬುದ್ಧಿವಾದವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Don't entertain such thoughts - I am dead. I am defeated. I have no more life (strength) left in me. Death is merely a low-tide at sea. High tide will come again tomorrow. Maintain hope. - Mankutimma [Translator's note: Perhaps DVG is talking about death of someone we completely rely on. May not be one's own death. But in the grand schema of the perpetual universe and rebirths, the same could be valid for one's own death as well.]

Themes

LifeDeathNatureWar

Video Section

Video Coming Soon

Detailed video explanations by scholars and experts will be available soon.