Mankutimmana Kagga by D.V. Gundappa
ನರಜೀವನದ ರಣದಿ ವಿಧಿಯ ಬಲವೊಂದು ಕಡೆ । ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ॥ ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು। ಪುರುಷತನವೇ ವಿಜಯ - ಮಂಕುತಿಮ್ಮ ॥ ೫೯೨ ॥
nara jIvanada raNadi vidhiya balavondu kaDe । chiravivEkadi beLeda nalumeyondu kaDe ॥ urubutire puruShange nalumeya uLitave gelavu । puruShatanavE vijaya - Mankutimma ॥ 592 ॥
ಮನುಷ್ಯನ ಬದುಕಿನ ಹೋರಾಟದಲ್ಲಿ ವಿಧಿಯ ಬಲವು ಒಂದು ಕಡೆ ಇವನನ್ನು ಸೆಳೆಯುತ್ತಿದ್ದರೆ, ಮನುಷ್ಯ ತನ್ನ ಸಾಮರ್ಥ್ಯದಿಂದ ಬೆಳೆಸಿಕೊಂಡ ವಿವೇಕವು ಇವನಿಗೆ ಬೇರೆ ದಾರಿಯನ್ನು ತೋರುತ್ತಿರುತ್ತದೆ. ಹೀಗೆ ಇವನ ಹೋರಾಟದ ಓಟದಲ್ಲಿ ಅಥವಾ ಇವನ ಬದುಕಿನಲ್ಲಿ ಇವನು ಕಡೆಗೆ ತನ್ನ ಜೀವದಲ್ಲಿ ಸತ್ವವನ್ನು ಬೆಳೆಸಿಕೊಂಡು ಉಳಿಸಿಕೊಂಡರೆ ಅವನಿಗೆ ನಲುಮೆ ಎಂದರೆ ಸಂತೋಷವನ್ನು ಪಡೆದುಕೊಂಡರೆ ಅದೇ ಅವನಿಗೆ ಜಯ ಸಿಕ್ಕಂತೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
In the battle of human life (everyone's life) Fate is on one side. The wisdom, love and affection acquired over the lifetime is on the other side. When you are going about progressing in life, retaining the love towards others is itself a pleasure. Showing off love and there by being human is itself victory. - Mankutimma
Video Coming Soon
Detailed video explanations by scholars and experts will be available soon.