Mankutimmana Kagga by D.V. Gundappa
ಬದುಕು ಕದನದ ತೆರನೆ; ನೋಡೆ ಲೀಲೆ ಕದನ । ಮೊದಲುಮುಗಿವುಗಳಿರದ ಚಿತ್ರಲೀಲೆಯದು ॥ ಇದರೊಳೆಂದಿಗುಮಿರದು ಸೋಲ್ಗೆಲುವು ಕಡೆಯೆಣಿಕೆ । ಸದರದಾಟವೆ ಮುಖ್ಯ - ಮಂಕುತಿಮ್ಮ ॥ ೫೯೧ ॥
baduku kadanada terane; nODe lIle kadana । modalu mugivigaLu irada chitra lIleyadu ॥ idaroLu endigum iradu sOl geluvu kaDeyeNike । sadaradATave mukhya - Mankutimma ॥ 591 ॥
ಜೀವನ ಒಂದು ಹೋರಾಟದಂತೆ ಅಥವಾ ಯುದ್ಧದಂತೆ. ಆದರೆ ಅದನ್ನು ಸೂಕ್ಷ್ಮವಾಗಿ ನೋಡಿದರೆ ಪರಮಾತ್ಮನು ತನ್ನ ಸಂತೋಷಕ್ಕಾಗಿ ಸೃಷ್ಟಿಸಿದ ಪ್ರಕೃತಿ ಮತ್ತು ತನ್ನ ಶಕ್ತಿ ಮತ್ತು ಪ್ರಕೃತಿಗಳ ಸಮ್ಮಿಲನದಿಂದ ಸೃಷ್ಟಿಸಿಕೊಂಡ, ಕೋಟ್ಯಾಂತರ ರೂಪಗಳನ್ನು ಹೊತ್ತ ಜೀವಿಗಳ ‘ಜೀವನ’ ವೆನ್ನುವ, ಲೀಲಾ ವಿನೋದವೆಂದು ನಮಗೆ ತಿಳಿಯುತ್ತದೆ. ಇದೊಂದು ಅಂತ್ಯವಿಲ್ಲದ ಜಗನ್ನಾಟಕದ ಹೋರಾಟ. ಈ ಹೋರಾಟದಲ್ಲಿ ಸೋಲು ಅಥವಾ ಗೆಲುವು ಎಂಬುದೇ ಇಲ್ಲ. ಸರಸದಿಂದ ಬದುಕುವುದೇ ಇಲ್ಲಿ ಮುಖ್ಯ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.
Life is like a battle. If you have the right perspective, it is a fun game. There is no beginning or an end to this game; just beautiful scenes. There is no result or final tally - hence no winners or losers. Having fun while playing is the only important thing. - Mankutimma
Video Coming Soon
Detailed video explanations by scholars and experts will be available soon.