Mankutimmana Kagga by D.V. Gundappa
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು । ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ॥ ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ । ಗಟ್ಟಿತನ ಗರಡಿ ಫಲ - ಮಂಕುತಿಮ್ಮ ॥ ೫೮೮ ॥
jaTTi kALagadi gelladoDe garaDiya sAmu । paTTuvarasegaLella viphalavennuveyEm? ॥ muTTI nODavana maikaTTu kabbiNa gaTTi । gaTTitana garaDi phala - Mankutimma ॥ 588 ॥
ಜಟ್ಟಿಯಾದವನು ಮಲ್ಲ ಯುದ್ದದಲ್ಲಿ ಸೋತರೆ, ಅವನು ಮಲ್ಲನಾಗುವತನಕ ಮಾಡಿದ ಸಾಮು ಮತ್ತು ಅಭ್ಯಾಸಗಳು ಮತ್ತು ಕಲಿತ ಪಟ್ಟು ವರಸೆಗಳೆಲ್ಲಾ ವ್ಯರ್ಥವೆನ್ನುತ್ತೀಯೇನು? ಅವನು ಸೋತಿದ್ದರೂ ಅವನನ್ನು ಒಮ್ಮೆ ಮುಟ್ಟಿ ನೋಡು ಅವನ ಮೈ ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ಅವನಿಗೆ ಆ ಗಟ್ಟಿತನ ಬಂದದ್ದು ಆ ಗರಡಿಯ ಸಾಮು ಮತ್ತು ವ್ಯಾಯಾಮದಿಂದ ಅಲ್ಲವೇ? ಹಾಗಾಗಿ ಸೋಲು ಗೆಲುವಲ್ಲ, ಗಟ್ಟಿತನವೇ ಗರಡಿಯ ಸಾಮಿನ ಮತ್ತು ಅಭ್ಯಾಸದ ಫಲ, ಎಂದು ಒಂದು ಉಪಮೆಯ ಮೂಲಕ ನಾವು ಬದುಕಿನಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು ಆದರೆ ನಾವು ಪಕ್ವವಾಗುವುದೇ ನಮ್ಮ ಜೀವನದ ಫಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If a wrestler loses a fight can you say that all his practice (of body building and wrestling moves) in the gym are all waste? Touch his body and see. It is as hard as iron. That physique is what the gym made him to be - and is worth all the effort. - Mankutimma
Video Coming Soon
Detailed video explanations by scholars and experts will be available soon.