Back to List

Kagga 587 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ । ಕಹಿಯೊಗರು ಕಾಯಿ, ಮಿಡಿತನದೊಳದು ಮುಗಿಯೆ ॥ ಸಿಹಿಯಹುದು ಕಾಯಿ ಹಣ್ಣಾಗೆ, ಜೀವಿತವಂತು । ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ॥ ೫೮೭ ॥

ahudu bAL bhandatanavu ihadi bAL mugiyuvoDe । kahiya ogaru kAyi, miDitanadoLadu mugiye ॥ sihiyahudu kAyi haNNAge, jIvitavantu । mahimegoLuvudu mAge - Mankutimma ॥ 587 ॥

Meaning in Kannada

ಒಂದು ಮರದಲ್ಲಿ ಬಿಟ್ಟ ಕಾಯಿ ಮಾಗದೆ, ಹಣ್ಣೇ ಆಗದೆ ಉದುರಿಹೋದರೆ ಅದು ಮಧ್ಯಂತರವಾಗಿ ಮುಗಿದುಹೋದ ಬಾಳಾಗುತ್ತದೆ. ಪರಿಪೂರ್ಣ ಸಾರ್ಥಕ ಬದುಕಿಗೆ ಅದು ಮಾಗಿ ಹಣ್ಣಾದರೆ, ಅದರೊಳಗೆ ಸವಿ ಸೇರಿ, ಸಿಹಿಯಾಗುತ್ತದೆ. ನಮ್ಮ ಜೀವಿತವೂ ಸಹಾ ಹಾಗೆಯೇ, ಬಂಡತನದ ಬಾಳಲ್ಲೇ ಅಂತ್ಯವಾಗದೆ, ಅನುಭವಿಸಿ, ಕಲಿತು, ಪಕ್ವವಾಗಬೇಕು, ಎಂದು ಬಾಳಿನ ಸಾರ್ಥಕ್ಯಕ್ಕೊಂದು ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Yes, life is meaningless for any one if it ends abruptly right now. A fruit has a bitter taste if its life ended when it was still very young. But as it ripens it sweetens. Our lives are very similar. They get a greater meaning as we get old (and ripe with wisdom). - Mankutimma

Themes

WisdomLifeDeathMorality

Video Section

Video Coming Soon

Detailed video explanations by scholars and experts will be available soon.