Mankutimmana Kagga by D.V. Gundappa
ಕೆಂಡಮುಸುಡಿಯ ದೈವವೆಲ್ಲವನು ದಹಿಸುತಿರೆ । ದಂಡಧರನತ್ತಲ್ಲೆಲ್ಲವನು ಕೆಡಹುತಿರೆ ॥ ಮೊಂಡುಘಾಸಿಯ ಲಾಭ ಪಿಂಡಮಾತ್ರವು ತಾನೆ? । ಭಂಡಬಾಳಲೆ ನಮದು? - ಮಂಕುತಿಮ್ಮ ॥ ೫೮೬ ॥
kenda musuDiya daivavu ellavanu dahisutire । danDadharanu ettalu ellavanu keDahutire ॥ monDughAsiya lAbha pinDamAtravu tAne? । bhanDa bALale namadu? - Mankutimma ॥ 586 ॥
ಜಗತ್ತಿನ ಪ್ರತಿ ಜೀತಿಯನ್ನೂ ಆ ಯಮನು ಕೆಡವಿ ಬೀಳಿಸುತ್ತಿರುವಾಗ ಮತ್ತು ಹಾಗೆ ಬಿದ್ದ ಪ್ರತಿಯೊಂದನ್ನೂ ಅಗ್ನಿದೇವನು ದಹಿಸಿಬೂದಿ ಮಾಡುತ್ತಿರುವಾಗ ಜಗತ್ತಿನಲ್ಲಿ ಬದುಕುವಾಗ ಮೊಂಡುತನಮಾಡಿ, ಪೆಟ್ಟು ತಿಂದು ಕೇವಲ ತುತ್ತು ಹಿಟ್ಟಿಗಾಗಿ ಹೋರಾಡುವ ನಮ್ಮದು ಕೇವಲ ಬಂಡ ಬಾಳು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The red faced fate is burning down everything (I do). Death is destroying every thing everywhere. Situation being so, the only result of all our struggle is just the the one handful of food. Right? This life is so hollow and has no greater meaning. - Mankutimma
Video Coming Soon
Detailed video explanations by scholars and experts will be available soon.